ಹರಿಯಾಣ ಪೊಲೀಸರಿಂದ ಅಶ್ರುವಾಯು ದಾಳಿ ; ತಲೆಗೆ ಗಾಯ, ರೈತ ಮೃತ್ಯು
Photo; PTI | Photo: X \ @SukhpalKhaira
ಹೊಸದಿಲ್ಲಿ : ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖಾನೌರಿಯಲ್ಲಿ ಬುಧವಾರ ಪೊಲೀಸ್ ಸಿಬ್ಬಂದಿ ಮತ್ತು ಪ್ರತಿಭಟನಾ ನಿರತ ರೈತರ ನಡುವಿನ ಘರ್ಷಣೆಯಲ್ಲಿ ಪೊಲೀಸರು ಸಿಡಿಸಿದ ಅಶ್ರುವಾಯು ದಾಳಿಗೆ 21 ವರ್ಷದ ರೈತರೊಬ್ಬರು ಮೃತಪಟ್ಟು ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು TimesOfIndia ವರದಿ ಮಾಡಿದೆ.
My heartfelt condolences to the family of deceased farmer Shubkaran son of Charanjit Singh of V.Ballo District Bathinda who was shot by Haryana police today at Khannauri border during #FarmerProtest2024. This is matter of grave concern and at the same time shame for @BhagwantMann… pic.twitter.com/WgXiLxMd4i
— Sukhpal Singh Khaira (@SukhpalKhaira) February 21, 2024
ಫೆಬ್ರವರಿ 13 ರಂದು 'ದೆಹಲಿ ಚಲೋ' ಮೆರವಣಿಗೆ ಪ್ರಾರಂಭವಾದ ನಂತರ ಘರ್ಷಣೆಯಲ್ಲಿ ಇದು ಮೊದಲ ಸಾವು ಎಂದು ರೈತ ಮುಖಂಡರು ತಿಳಸಿದ್ದಾರೆ. ಬಲಿಯಾದವರನ್ನು ಪಂಜಾಬ್ನ ಬಟಿಂಡಾ ಜಿಲ್ಲೆಯ ಬಲೋಕೆ ಗ್ರಾಮದ ನಿವಾಸಿ ಸುಭಕರನ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ರೈತ ಮುಖಂಡ ಬಲದೇವ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.
ಪಟಿಯಾಲ ಮೂಲದ ರಾಜೀಂದ್ರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಎಚ್ಎಸ್ ರೇಖಿ ಸುದ್ದಿಗಾರರೊಂದಿಗೆ ಮಾತನಾಡಿ, ಮೂವರನ್ನು ಖಾನೌರಿ ಗಡಿ ಬಿಂದುವಿನಿಂದ ಆಸ್ಪತ್ರೆಗೆ ಕರೆತರಲಾಗಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
VIDEO | Farmers' 'Delhi Chalo' march: Tear gas shells fired at Shambhu border. More details are awaited. pic.twitter.com/4TSRuqmZvT
— Press Trust of India (@PTI_News) February 21, 2024