ದಿಲ್ಲಿ ಚಲೊ ನಡೆಸುತ್ತಿದ್ದ ರೈತರ ಮೇಲೆ ಆಶ್ರುವಾಯು ಪ್ರಯೋಗಿಸಿದ ಪೊಲೀಸರು
Photo: PTI
ಹೊಸದಿಲ್ಲಿ: 'ದಿಲ್ಲಿ ಚಲೊ' ನಡೆಸಲು ಮುಂದಾದ ರೈತ ಹೋರಾಟಗಾರರನ್ನು ಹರ್ಯಾಣ-ಪಂಜಾಬ್ ಶಂಭು ಗಡಿಯ ಬಳಿ ತಡೆದ ಪೊಲೀಸರು, ಅವರನ್ನು ಚದುರಿಸಲು ಅಶ್ರುವಾಯು ಶೆಲ್ ಮತ್ತು ಜಲಫಿರಂಗಿ ಪ್ರಯೋಗಿಸಿದ್ದಾರೆ.
ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದಿಲ್ಲಿಯತ್ತ ಮೆರವಣಿಗೆ ನಡೆಸುವುದಾಗಿ ಇದಕ್ಕೂ ಮುನ್ನ ಪ್ರತಿಭಟನಾನಿರತ ರೈತರು ಪ್ರಕಟಿಸಿದ್ದರು.
ಭಾರಿ ಪೊಲೀಸ್ ಭದ್ರತೆಯ ನಡುವೆಯೂ, ಪಂಜಾಬ್-ಹರ್ಯಾಣ ಶಂಭು ಗಡಿಯಿಂದ ಇಂದು ತಮ್ಮ ದಿಲ್ಲಿ ಚಲೊ ಮೆರವಣಿಗೆಗೆ ಪ್ರತಿಭಟನಾನಿರತ ರೈತರು ಚಾಲನೆ ನೀಡಿದರು.
Next Story