ತೆಲಂಗಾಣ : ನಾಳೆ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣವಚನ ಸ್ವೀಕಾರ
ರೇವಂತ್ ರೆಡ್ಡಿ | Photo: PTI
ಹೈದರಾಬಾದ್: ಗುರುವಾರ ಮಧ್ಯಾಹ್ನ 1.04 ಗಂಟೆಗೆ ತೆಲಂಗಾಣದ ನೂತನ ಸಿಎಂ ಆಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನ ಕಾರ್ಯಕ್ರಮವನ್ನು ಹೈದರಬಾದ್ ನಗರದ ಎಲ್ಬಿ ಸ್ಟೇಡಿಯಂನಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದೆ.
ಎಲ್ಬಿ ಸ್ಟೇಡಿಯಂ ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಭಾರಿ ತಯಾರಿ ನಡೆಸಲಾಗುತ್ತಿದೆ. ಒಟ್ಟು ಮೂರು ವೇದಿಕೆಗಳನ್ನು ಸಿದ್ಧಪಡಿಸಲಾಗಿದ್ದು, ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ವೇದಿಕೆಯ ಎಡಭಾಗದಲ್ಲಿ 63 ಶಾಸಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಮತ್ತೊಂದು ವೇದಿಕೆಯಲ್ಲಿ ಹುತಾತ್ಮರ ಕುಟುಂಬಸ್ಥರು ಸೇರಿದಂತೆ ಗಣ್ಯರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸ್ಟೇಡಿಯಂ ನಲ್ಲಿ ಕೂರಲು ವ್ಯವಸ್ಥೆ ಮತ್ತು ಸ್ಟೇಡಯಂ ಹೊರಗೆ ನಿಂತು ವೀಕ್ಷಿಸಲು ಎಲ್ಇಡಿ ಸ್ಕ್ರೀನ್ ಅಳವಡಿಸಲಾಗಿದೆ.
Next Story