ಉತ್ತರ ಪ್ರದೇಶ | 44 ವರ್ಷಗಳ ಬಳಿಕ ಬಾಗಿಲು ತೆರೆದ ಮತ್ತೊಂದು ದೇವಾಲಯ
(Images via Dainik Bhaskar)
ಮೊರದಾಬಾದ್ : ಮೊರದಾಬಾದ್ ನಲ್ಲಿ ಕೋಮು ಹಿಂಸಾಚಾರದ ಹಿನ್ನೆಲೆಯಲ್ಲಿ ದಶಕಗಳ ಕಾಲ ಮುಚ್ಚಲಾಗಿದ್ದ ದೌಲತಾಬಾದ್ನ ದೇವಾಲಯವನ್ನು ಮತ್ತೆ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಮುಚ್ಚಲಾಗಿದ್ದ ಪರಿತ್ಯಕ್ತ ದೇವಾಲಯಗಳನ್ನು ಮನವಿಯ ಮೇರೆಗೆ ಮರು ತೆರೆಯುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
44 ವರ್ಷಗಳ ಬಳಿಕ ದೌಲತಾಬಾದ್ನಲ್ಲಿರುವ ದೇವಾಲಯವನ್ನು ಸೋಮವಾರ ಮರು ತೆರೆಯಲಾಗಿದೆ.
‘‘ಆಡಳಿತದ ಆದೇಶದ ಹಿನ್ನೆಲೆಯಲ್ಲಿ ಪೊಲಿೀಸ್, ಮುನ್ಸಿಪಲ್ ಕಾರ್ಪೋರೇಶನ್ ನ ಸಿಬ್ಬಂದಿಯನ್ನು ಒಳಗೊಂಡ ತಂಡ ದೇವಾಲಯವನ್ನು ಮರು ತೆರೆಯುವ ಕಾರ್ಯಾಚರಣೆ ಆರಂಭಿಸಿತು. ಇದಕ್ಕೆ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ. ಸ್ಥಳೀಯರು ಸಹಕಾರ ನೀಡಿದರು’’ ಎಂದು ನಾಗಫಾನಿ ಪೊಲೀಸ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ತಿಳಿಸಿದ್ದಾರೆ.
ದೇವಾಲಯ ಮರು ತೆರೆದ ಬಳಿಕ, ಕೆಲವು ಮೂರ್ತಿಗಳು ಸ್ಥಳಾಂತರಗೊಂಡಿರುವುದು ಅಥವಾ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ದೇವಾಲಯದ ನವೀಕರಣ ಸ್ಥಳೀಯಾಡಳಿತ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.