ಡಿಸೆಂಬರ್ 2ರಂದು ಸರ್ವ ಪಕ್ಷಗಳ ಸಭೆ ಕರೆದ ಕೇಂದ್ರ ಸರಕಾರ
Photo: NDTV
ಹೊಸದಿಲ್ಲಿ : ಕೇಂದ್ರ ಸರಕಾರ ಸಂಸತ್ತಿನ ಚಳಿಗಾಲದ ಅಧಿವೇಶನದ ಮುನ್ನ ಡಿ. 2ರಂದು ಪೂರ್ವಾಹ್ನ 11 ಗಂಟೆಗೆ ಸರ್ವ ಪಕ್ಷಗಳ ಸಭೆ ಕರೆದಿದೆ.
ಕೇಂದ್ರ ಸರಕಾರದ ಪರವಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಈ ಕುರಿತು ಪ್ರಕಟಿಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಡಿ. 4ರಂದು ಆರಂಭವಾಗಿ ಡಿ.22ರ ವರೆಗೆ ಮುಂದುವರಿಯಲಿದೆ ಎಂದು ಪ್ರಹ್ಲಾದ ಜೋಷಿ ಅವರು ನ. 9ರಂದು ಹೇಳಿದ್ದರು.
‘x’ನ ಪೋಸ್ಟ್ ನಲ್ಲಿ ಅವರು, ಅಧಿವೇಶನಗಳು 19 ದಿನಗಳ ಕಾಲ 15 ಬೈಠಕ್ ನಲ್ಲಿ ನಡೆಯಲಿದೆ ಎಂದು ತಿಳಿಸಿದ್ದರು.
ಈ ಅಧಿವೇಶನದಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ (ಸಿಆರ್ಪಿಸಿ) ಹಾಗೂ ಪುರಾವೆ ಕಾಯ್ದೆಗಳನ್ನು ಬದಲಾಯಿಸುವ ಗುರಿ ಹೊಂದಿರುವ ಮೂರು ಪ್ರಮುಖ ಮಸೂದೆಗಳ ಕುರಿತು ಚರ್ಚೆ ನಡೆಯಲಿದೆ.
Next Story