ದ್ವೇಷ ಭಾಷಣಗಳಿಗಾಗಿ ಪ್ರಧಾನಿ ಮೋದಿಯನ್ನು ಚುನಾವಣೆ ಸ್ಪರ್ಧಿಸುವುದರಿಂದ ನಿಷೇಧಿಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿ ಪರಿಗಣಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್
ನರೇಂದ್ರ ಮೋದಿ , ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಚುನಾವಣಾ ಪ್ರಚಾರದ ವೇಳೆ “ದ್ವೇಷದ ಭಾಷಣಗಳನ್ನು” ಮಾಡಿದ್ದಕ್ಕೆ ಹಾಗೂ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚುನಾವಣೆ ಸ್ಪರ್ಧಿಸುವುದರಿಂದ ಆರು ವರ್ಷಗಳ ಕಾಲ ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಗಣಿಸಲು ಇಂದು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಈ ಕೋರಿಕೆಯ ಕುರಿತಂತೆ ಸಂಬಂಧಿತ ಪ್ರಾಧಿಕಾರದ ಮುಂದೆ ಹೋಗುವಂತೆ ಅರ್ಜಿದಾರರಿಗೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎಸ್ ಸಿ ಶರ್ಮ ಅವರ ಪೀಠ ಸೂಚಿಸಿದೆ.
ನಂತರ ಅರ್ಜಿದಾರರು ತಮ್ಮ ಅರ್ಜಿಯನ್ನು ವಾಪಸ್ ಪಡೆದ ಕಾರಣ ಈ ಪ್ರಕರಣವನ್ನು ಹಿಂಪಡೆಯಲಾಗಿದೆ ಎಂದು ವಜಾಗೊಳಿಸಲಾಗಿದೆ.
ಫಾತಿಮಾ ಎಂಬವರು ವಕೀಲ ಆನಂದ್ ಎಸ್ ಜೊಂಧಾಲೆ ಅವರ ಮುಖಾಂತರ ಈ ಅರ್ಜಿ ಸಲ್ಲಿಸಿದ್ದರು ಹಾಗೂ ಜನ ಪ್ರತಿನಿಧಿತ್ವ ಕಾಯಿದೆಯಡಿ ಪ್ರಧಾನಿಯನ್ನು ಆರು ವರ್ಷ ಚುನಾವಣೆಗಳಿಂದ ನಿಷೇಧಿಸಲು ಚುನಾವಣಾ ಆಯೋಗಕ್ಕೆ ಸೂಚಿಸಬೇಕೆಂದು ಕೋರಿದ್ದರು.
Next Story