ಡಿ ಆರ್ ಡಿ ಒ ಅಧ್ಯಕ್ಷರ ಸೇವಾವಧಿ ಒಂದು ವರ್ಷ ವಿಸ್ತರಣೆ
ಡಾ.ಸಮೀರ್ ವಿ.ಕಾಮತ್ | PC : scroll.in
ಹೊಸದಿಲ್ಲಿ : ಸಂಪುಟದ ನೇಮಕಾತಿ ಸಮಿತಿಯು ಸೋಮವಾರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್ ಡಿ ಒ)ಯ ಅಧ್ಯಕ್ಷ ಡಾ.ಸಮೀರ್ ವಿ.ಕಾಮತ್ ಅವರ ಸೇವಾವಧಿಯನ್ನು 2025, ಮೇ 31ರವರೆಗೆ ಒಂದು ವರ್ಷ ಕಾಲ ವಿಸ್ತರಿಸಿದೆ.
ರವಿವಾರವಷ್ಟೇ ಸೇನಾ ಮುಖ್ಯಸ್ಥ ಜ.ಮನೋಜ್ ಪಾಂಡೆ ಅವರ ಸೇವಾವಧಿಯನ್ನು 2024, ಜೂ.30ರವರೆಗೆ ಒಂದು ತಿಂಗಳು ವಿಸ್ತರಿಸಲಾಗಿತ್ತು.
ಕಾಮತ್ ಅವರ ಸೇವಾವಧಿ ವಿಸ್ತರಣೆಗಾಗಿ ರಕ್ಷಣಾ ಸಚಿವಾಲಯವು ಸಲ್ಲಿಸಿದ್ದ ಪ್ರಸ್ತಾವವನ್ನು ಅನುಮೋದಿಸಲಾಗಿದೆ. ಅವರ ಅಧಿಕಾರಾವಧಿಯನ್ನು 2024, ಜೂ.1ರಿಂದ 2025,ಮೇ 31ರವರೆಗೆ ಅಥವಾ ಮುಂದಿನ ಆದೇಶದವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ವಿಸ್ತರಿಸಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಅಧಿಸೂಚನೆಯಲ್ಲಿ ತಿಳಿಸಿದೆ.
2022, ಆಗಸ್ಟ್ ನಲ್ಲಿ ಹುದ್ದೆಗೆ ನೇಮಕಗೊಂಡಿದ್ದ ಕಾಮತ್, ಆಗ ರಕ್ಷಣಾ ಸಚಿವರಿಗೆ ವೈಜ್ಞಾನಿಕ ಸಲಹೆಗಾರರಾಗಿ ನೇಮಕಗೊಂಡಿದ್ದ ಡಾ.ಜಿ.ಸತೀಶ್ ರೆಡ್ಡಿಯವರಿಂದ ಅಧಿಕಾರ ಸ್ವೀಕರಿಸಿದ್ದರು.