ರೈಲು ಢಿಕ್ಕಿಯಾಗಿ ಮೂವರು ಅಂಗವಿಕಲ ಮಕ್ಕಳು ಸಾವು
File Photo | PTI
ಚೆನ್ನೈ: ಚೆನ್ನೈಬೀಚ್-ಚೆಂಗಲಪಟ್ಟು ಮಾರ್ಗದಲ್ಲಿ ಸಂಚರಿಸುತ್ತಿದ್ದ ಎಮು(EMU) ರೈಲು ಢಿಕ್ಕಿ ಹೊಡೆದು ಮೂವರು ಅಂಗವಿಕಲ ಮಕ್ಕಳು ಮೃತಪಟ್ಟ ಘಟನೆ ಚೆಂಗಲಪಟ್ಟುವಿನಲ್ಲಿ ಮಂಗಳವಾರ ನಡೆದಿದೆ.
ಮೃತಪಟ್ಟ ಮಕ್ಕಳನ್ನು ರವಿ (12), ಸುರೇಶ್ (15) ಹಾಗೂ ಮಂಜುನಾಥನ್ (15) ಎಂದು ಗುರುತಿಸಲಾಗಿದೆ. ಇವರು ಕರ್ನಾಟಕದ ಕೊಪ್ಪಳ ಜಿಲ್ಲೆಯವರು. ಇಲ್ಲಿನ ಉರಪಕ್ಕಂನಲ್ಲಿ ಕೂಲಿಗಳಾಗಿ ಕೆಲಸ ಮಾಡುತ್ತಿದ್ದ ತಮ್ಮ ಪೋಷಕರನ್ನು ಭೇಟಿಯಾಗಲು ಅವರು ಇಲ್ಲಿಗೆ ಬಂದಿದ್ದರು.
ರವಿ ಹಾಗೂ ಸುರೇಶ್ ಕಿವುಡರು ಹಾಗೂ ಮಂಜುನಾಥನ್ ಮೂಕ. ಇವರು ಉರಪಕ್ಕಂನಲ್ಲಿರುವ ತಮ್ಮ ಗುಡಿಸಲಿನ ಸಮೀಪದ ರೈಲ್ವೆ ಹಳಿಯಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಆಟವಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.
ತಂಬರಾಮ್ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಾಗೂ ತನಿಖೆ ಆರಂಭಿಸಿದ್ದಾರೆ.
Next Story