ತಿರುಪತಿ ದೇವಾಲಯ ಇರುವ ಪ್ರದೇಶದಲ್ಲಿನ ಹೊಟೇಲ್ ಗಳಿಗೆ ಬಾಂಬ್ ಬೆದರಿಕೆ: ತನಿಖೆ ಚುರುಕು
ತಿರುಪತಿ ದೇವಾಲಯ (Photo credit: indiatoday.in)
ಆಂಧ್ರಪ್ರದೇಶ: ತಿರುಪತಿ ದೇವಾಲಯ ಇರುವ ಪ್ರದೇಶದಲ್ಲಿನ ಮೂರು ಹೊಟೇಲ್ ಗಳಿಗೆ ಈಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿರುವ ಬಗ್ಗೆ ವರದಿಯಾಗಿದೆ.
ಬೆದರಿಕೆಗೆ ಕರೆ ಹಿನ್ನೆಲೆ ಪೊಲೀಸರು ಹೋಟೆಲ್ ಗಳಲ್ಲಿ ಸಂಪೂರ್ಣವಾಗಿ ಶೋಧ ಕಾರ್ಯ ನಡೆಸಿದ್ದು, ಬೆದರಿಕೆ ಹುಸಿ ಎಂದು ದೃಢಪಟ್ಟಿದೆ. ಲೀಲಾ ಮಹಲ್, ಕಪಿಲ ತೀರ್ಥಂ ಮತ್ತು ಅಲಿಪಿರಿ ಬಳಿಯ ಮೂರು ಖಾಸಗಿ ಹೋಟೆಲ್ ಗಳಿಗೆ ಈಮೇಲ್ ಮೂಲಕ ಬೆದರಿಕೆಗಳು ಬಂದಿವೆ. ಬೆದರಿಕೆಯ ಮೂಲದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಿರುಪತಿ ಪೂರ್ವ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸುಲು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈಮೇಲ್ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ವಿವಿಧ ಆಯಾಮಗಳಿಂದ ತನಿಖೆ ನಡೆಯುತ್ತಿದೆ. ನಾವು ಶೀಘ್ರದಲ್ಲೇ ಅಪರಾಧಿಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಹೇಳಿದ್ದಾರೆ.
ದೇಶದ ವಿಮಾನಯಾನ ಸಂಸ್ಥೆಗಳು ಮತ್ತು ಸಿ ಆರ್ ಪಿಎಫ್ ಶಾಲೆಗಳಿಗೆ ಸರಣಿ ಬಾಂಬ್ ಬೆದರಿಕೆ ಬೆನ್ನಲ್ಲಿ ಈ ಬೆಳವಣಿಗೆ ನಡೆದಿದೆ.
Next Story