ಬೀಫ್ ಕಳ್ಳಸಾಗಣೆಗಾರರಿಗೆ ಪಾಸ್ ಒದಗಿಸಿದ ಕೇಂದ್ರ ಸಚಿವ ಶಂತನು ಠಾಕೂರ್: ಸಂಸದೆ ಮಹುವಾ ಮೊಯಿತ್ರಾ ಆರೋಪ
Photo:X/@MahuaMoitra
ಹೊಸದಿಲ್ಲಿ: ಭಾರತ-ಬಾಂಗ್ಲಾದೇಶ ಗಡಿ ಬಳಿಯಿರುವ ಬೀಫ್ ಕಳ್ಳಸಾಗಣೆದಾರರಿಗೆ ಕೇಂದ್ರ ಸಚಿವ ಶಂತನು ಠಾಕೂರ್ ಅಧಿಕೃತ ಸಾಗಣೆ ಪರವಾನಗಿ ಪತ್ರ (ಪಾಸ್) ವಿತರಿಸುತ್ತಿದ್ದಾರೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಗಂಭೀರ ಆರೋಪ ಮಾಡಿದ್ದಾರೆ.
ಪಾಸ್ ನ ಚಿತ್ರವನ್ನು ಲಗತ್ತಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಹುವಾ ಮೊಯಿತ್ರಾ, ಶಂತನು ಠಾಕೂರ್ ಮೂರು ಕೆಜಿ ತೂಕದ ಗೋಮಾಂಸದ ಕಳ್ಳ ಸಾಗಣೆ ಮಾಡಲು ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ತಮ್ಮ ಈ ಪೋಸ್ಟ್ನೊಂದಿಗೆ ಗಡಿ ಭದ್ರತಾ ಪಡೆ ಮತ್ತು ಗೃಹ ವ್ಯವಹಾರಗಳ ಸಚಿವಾಲಯವನ್ನೂ ಟ್ಯಾಗ್ ಮಾಡಿದ್ದಾರೆ. ಅಲ್ಲದೆ, ಈ ವಿಷಯದ ಕುರಿತು ಮೌನಕ್ಕೆ ಶರಣಾಗಿರುವ ಗೋರಕ್ಷಕರು ಮತ್ತು ಗೋದಿ ಮಾಧ್ಯಮಗಳನ್ನು ತಿವಿದಿದ್ದಾರೆ.
ಶಂತನು ಠಾಕೂರ್ ಅವರ ಅಧಿಕೃತ ಲೆಟರ್ ಹೆಡ್ ಎಂದು ಹೇಳಲಾಗಿರುವ ಪತ್ರವನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮಹುವಾ ಮೊಯಿತ್ರಾ ಹಂಚಿಕೊಂಡಿದ್ದಾರೆ. ಗೋಮಾಂಸವನ್ನು ಸಾಗಿಸಲು ಅನುಮತಿ ನೀಡಿ, ಈ ಕುರಿತು ಗಡಿ ಭದ್ರತಾ ಪಡೆಯ 85ನೇ ತುಕಡಿಗೆ ಶಂತನು ಠಾಕೂರ್ ಬರೆದಿರುವ ಪತ್ರ ಇದೆನ್ನಲಾಗಿದೆ.
ವರದಿಗಳ ಪ್ರಕಾರ, ಬಿಜೆಪಿಯ ಬೊಂಗಾವ್ ಸಂಸದ ಠಾಕೂರ್ ಅವರು ಭಾರತ-ಬಾಂಗ್ಲಾದೇಶ ಗಡಿ ಪ್ರದೇಶದಲ್ಲಿ ವಿವಿಧ ವ್ಯವಹಾರಗಳನ್ನು ನಡೆಸಲು ತಮ್ಮ ಸಂಸದರ ಲೆಟರ್ಹೆಡ್ನಲ್ಲಿ ಅನುಮತಿ ನೀಡಿದ್ದಕ್ಕಾಗಿ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದಾರೆ. ಆರೆಸ್ಸೆಸ್ ಕೂಡ ಈ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.
ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ವಿವಿಧ ವ್ಯವಹಾರಗಳನ್ನು ನಡೆಸಲು ಬಾಂಗಾಂವ್ ಲೋಕಸಭಾ ಕ್ಷೇತ್ರದ ಸಂಸದರಾದ ಶಂತನು ಠಾಕೂರ್ ತಮ್ಮ ಸಂಸದರ ಲೆಟರ್ಹೆಡ್ನಲ್ಲಿ ಅನುಮತಿ ನೀಡುತ್ತಿರುವುದರಿಂದ, ವಿರೋಧ ಪಕ್ಷಗಳು ಅವರ ಮೇಲೆ ಮುಗಿ ಬಿದ್ದಿವೆ.
Union Minister has printed forms on official letterhead to @BSF_India 85BN issuing “passes” for smugglers on Indo-Bangla border. In this case for allowing 3 kgs of Beef.
— Mahua Moitra (@MahuaMoitra) July 8, 2024
Hello @HMOIndia , Gau Rakshak Senas, Godi Media. pic.twitter.com/iYXdihtrVI