ಉತ್ತರ ಪ್ರದೇಶ: ಪ್ಲಾಟ್ಫಾರ್ಮ್ಗೆ ನುಗ್ಗಿದ ರೈಲು; ತಪ್ಪಿದ ಅನಾಹುತ
Photo: PTI
ಲಖನೌ: ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ (ಇಎಂಯು) ರೈಲೊಂದು ಏಕಾಏಕಿ ಪ್ಲಾಟ್ಫಾರ್ಮ್ಗೆ ನುಗ್ಗಿದ ಘಟನೆ ಉತ್ತರ ಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿ ನಡೆದಿದೆ.
ರೈಲು ಶಕುರ್ ಬಸ್ತಿಯಿಂದ ರಾತ್ರಿ 10:49ಕ್ಕೆ ಮಥುರಾ ನಿಲ್ದಾಣಕ್ಕೆ ಬಂದಿದ್ದು, ಎಲ್ಲಾ ಪ್ರಯಾಣಿಕರು ರೈಲಿನಿಂದ ಇಳಿದ ಕೆಲವೇ ಕ್ಷಣಗಳಲ್ಲಿ ಇದ್ದಕ್ಕಿದ್ದಂತೆ ರೈಲು ಪ್ಲಾಟ್ಫಾರ್ಮ್ಗೆ ನುಗ್ಗಿದೆ. ಪ್ರಯಾಣಿಕರು ರೈಲಿನಿಂದ ಇಳಿದಿದ್ದರಿಂದ ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆ ಸಂಬಂಧ ಪ್ರತಿಕ್ರಿಯಿಸಿದ ಮಥುರಾ ರೈಲು ನಿಲ್ದಾಣದ ನಿರ್ದೇಶಕ ಎಸ್.ಕೆ ಶ್ರೀವಾಸ್ತವ, "ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದೇವೆ. ಇತರೆ ರೈಲುಗಳ ಸಂಚಾರಕ್ಕೆ ಅಡಚಣೆ ಆಗಿದೆ" ಎಂದು ಹೇಳಿದ್ದಾರೆ.
Next Story