ಕಾಶ್ಮೀರದ ಹಿಮಪಾತದ ನಡುವೆ ರೈಲು ಸಂಚಾರ ; ವೀಡಿಯೊವನ್ನು ಹಂಚಿಕೊಂಡ ಸಚಿವ ಅಶ್ವಿನಿ ವೈಷ್ಣವ್
Photo: NDTV
ಹೊಸ ದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತದ ನಡುವೆಯೂ ರೈಲೊಂದು ಸಂಚರಿಸುತ್ತಿರುವ ಮನಸೆಳೆಯುವ ವೀಡಿಯೊವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಂಚಿಕೊಂಡಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿನ ಬಾರಾಮುಲ್ಲ-ಬಹಿಹಾಲ್ ವಿಭಾಗದಿಂದ ಆ ರೈಲು ಕಾರ್ಯಾಚರಣೆ ನಡೆಸುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ವೀಡಿಯೊದೊಂದಿಗೆ “ಕಾಶ್ಮೀರ ಕಣಿವೆಯಲ್ಲಿ ಹಿಮಪಾತ” ಎಂಬ ಶೀರ್ಷಿಕೆ ನೀಡಿದ್ದಾರೆ.
ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾಗಿರುವ ಈ ವೀಡಿಯೊಗೆ ಈವರೆಗೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಬಂದಿದೆ.
ಈ ವೀಡಿಯೊಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಂತರ್ಜಾಲ ಬಳಕೆದಾರರೊಬ್ಬರು, “ಪಿಸುಗುಟ್ಟುವ ವೀಡಿಯೊ” ಎಂದು ಬಣ್ಣಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು, “ಚಿತ್ರಗಳನ್ನು ನೋಡಿದರೆ ಸ್ವಿಝರ್ ಲೆಂಡ್ ನಂತೆ ಕಾಣಿಸುತ್ತಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.
“ಕಾಶ್ಮೀರದಲ್ಲಿ ಹಿಮ ಮುಚ್ಚಿದ ರೈಲು ಪ್ರಯಾಣ, ಭಾರತದ ಸ್ವಿಝರ್ ಲೆಂಡ್ ಗೆ ರೈಲು ಪ್ರಯಾಣ” ಎಂದು ಮೂರನೆಯ ಬಳಕೆದಾರರು ಕೊಂಡಾಡಿದ್ದಾರೆ.
कश्मीर की वादियों में स्नोफॉल !
— Ashwini Vaishnaw (@AshwiniVaishnaw) February 1, 2024
Baramulla - Banihal section pic.twitter.com/WCsMSYKRqd