ವಕ್ಫ್ ಮಸೂದೆಗೆ ಜೆಡಿಯು ಬೆಂಬಲ ವಿರೋಧಿಸಿ ಇನ್ನೂ ಇಬ್ಬರು ನಾಯಕರ ರಾಜೀನಾಮೆ

PC : PTI
ಪಾಟ್ನಾ: ಸಂಸತ್ತಿನಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ ಅಂಗೀಕಾರಗೊಂಡ ಬಳಿಕ ಬಿಜೆಪಿಯ ಪ್ರಮುಖ ಮಿತ್ರಪಕ್ಷವಾಗಿರುವ ಜೆಡಿಯುಗೆ ಸರಣಿ ರಾಜೀನಾಮೆಗಳು ಕಾಡುತ್ತಿದ್ದು,ಇನ್ನೂ ಇಬ್ಬರು ನಾಯಕರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮಸೂದೆಗೆ ಜೆಡಿಯು ಬೆಂಬಲವನ್ನು ವಿರೋಧಿಸಿ ಹಿರಿಯ ನಾಯಕರಾದ ಮುಹಮ್ಮದ್ ಕಾಸಿಂ ಅನ್ಸಾರಿ ಮತ್ತು ಮುಹಮ್ಮದ್ ನವಾಝ್ ಮಲಿಕ್ ಈಗಾಗಲೇ ಪಕ್ಷವನ್ನು ತೊರೆದಿದ್ದು,ಈಗ ಇನ್ನಿಬ್ಬರು ನಾಯಕರಾದ ತಬ್ರೇಝ್ ಸಿದ್ದಿಕಿ ಅಲಿಗ್ ಮತ್ತು ದಿಲ್ಶಾನ್ ರಯೀನ್ ಅವರು ಜೆಡಿಯುಗೆ ರಾಜೀನಾಮೆ ನೀಡಿದ್ದಾರೆ.
ಆದರೆ ಪಕ್ಷಕ್ಕೆ ನಾಯಕರ ರಾಜೀನಾಮೆ ವರದಿಗಳನ್ನು ಅಲ್ಲಗಳೆದಿರುವ ಜೆಡಿಯು,ವಕ್ಫ್ ಮಸೂದೆಯು ಬಡ ಮುಸ್ಲಿಮರ ಪಾಲಿನ ‘ಆಶಾ ಕಿರಣ’ವಾಗಿದೆ ಎಂದು ಬಣ್ಣಿಸಿದೆ.
Next Story