ನನಗೂ ಅದಕ್ಕೂ ಸಂಬಂಧವಿಲ್ಲ: ಮಣಿಪುರ ಹಿಂಸಾಚಾರದ ಬಗ್ಗೆ ಕೇಂದ್ರ ಸಚಿವರ ಹೇಳಿಕೆ
ಈಶಾನ್ಯ ಪ್ರದೇಶಗಳ ಅಭಿವೃದ್ಧಿ ಸಚಿವ ಕಿಶನ್ ರೆಡ್ಡಿ ವಿರುದ್ಧ ಪ್ರತಿಪಕ್ಷಗಳ ತರಾಟೆ
ಕಿಶನ್ ರೆಡ್ಡಿ (PTI)
ಹೊಸದಿಲ್ಲಿ: ಈಶಾನ್ಯ ಭಾರತದ ಅಭಿವೃದ್ಧಿಯ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರು ಮಣಿಪುರದಲ್ಲಿ ಹಿಂಸಾಚಾರ ಮತ್ತು ಅಶಾಂತಿಯ ಘಟನೆಗಳ ಬಗ್ಗೆ ವರದಿಗಾರರ ಪ್ರಶ್ನೆಗೆ ನೀಡಿದ ಪ್ರತಿಕ್ರಿಯೆ ಈಗ ವಿವಾದಕ್ಕೆ ಕಾರಣವಾಗಿದೆ.
ಮಣಿಪುರದ ಹಿಂಸಾಚಾರ ಕುರಿತ ವರದಿಗಾರರ ಪ್ರಶ್ನೆಗೆ ತಾನು ಏಕೆ ಮಾತನಾಡಬೇಕು ಎಂದು ವರದಿಗಾರರ ಮೈಕ್ ಅನ್ನು ಕೇಂದ್ರ ಸಚಿವರು ದೂರ ತಳ್ಳಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
“ಇದು ಕಾನೂನು ಮತ್ತು ಸುವ್ಯವಸ್ಥೆಯ ವಿಷಯ, ಇದಕ್ಕೂ ನನಗೂ ಸಂಬಂಧವಿಲ್ಲ. ನನಗೆ ಮಂತ್ರಿಗಿರಿ ಇಲ್ಲ. ಸಚಿವಾಲಯಕ್ಕೂ ನನಗೂ ಸಂಬಂಧವಿಲ್ಲ,'' ಎಂದು ಅವರು ಹೇಳುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಜುಲೈ 4 ರಂದು ಬಿಜೆಪಿಯ ತೆಲಂಗಾಣ ರಾಜ್ಯ ಅಧ್ಯಕ್ಷರಾಗಿ ಕಿಶನ್ ರೆಡ್ಡಿಯನ್ನು ನೇಮಿಸಲಾಗಿದ್ದು, ಈಶಾನ್ಯ ಪ್ರದೇಶದ ಅಭಿವೃದ್ಧಿಯ ಕೇಂದ್ರ ಸಚಿವ ಸೇರಿದಂತೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮದ ಖಾತೆಗಳನ್ನು ಸಹ ಅವರು ಹೊಂದಿದ್ದಾರೆ.
Next Story