ತ್ರಿಪುರಾದಲ್ಲಿ ದುರಸ್ಥಿಯಾಗದ ರಸ್ತೆ | 600ಕ್ಕೂ ಅಧಿಕ ಬುಡಕಟ್ಟು ಜನರಿಂದ ಮತದಾನ ಬಹಿಷ್ಕಾರ
ಸಾಂದರ್ಭಿಕ ಚಿತ್ರ | PC : PTI
ಅಗರ್ತಲಾ: 7 ಕಿ.ಮೀ. ಗ್ರಾಮ ರಸ್ತೆ ದುರಸ್ಥಿಯಾಗದ ಸ್ಥಿತಿಯಲ್ಲಿರುವ ಕಾರಣಕ್ಕಾಗಿ ತ್ರಿಪುರಾ ಲೋಕಸಭಾ ಕ್ಷೇತ್ರದ ಭಾಗವಾದ ದಲಾಯಿ ಜಿಲ್ಲೆಯ ಬುಡಕಟ್ಟು ಕುಗ್ರಾಮವೊಂದರ 600ಕ್ಕೂ ಅಧಿಕ ಮತದಾರರು ಶುಕ್ರವಾರ ಚುನಾವಣೆ ಬಹಿಷ್ಕರಿಸಿದ್ದಾರೆ.
ಸುಮಾರು 900 ಗ್ರಾಮ ನಿವಾಸಿಗಳು ತಮ್ಮ ಸಮುದಾಯಕ್ಕೆ ರಸ್ತೆಯ ನಿರ್ಣಾಯಕ ಪ್ರಾಮುಖ್ಯತೆಯ ಕುರಿತು ಒತ್ತಿ ಹೇಳಿದ್ದು, ತಿಂಗಳಿಂದ ದುರಸ್ಥಿಗಾಗಿ ನಿರಂತರ ಆಗ್ರಹಿಸುತ್ತಾ ಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ವೇಳಾಪಟ್ಟಿಯಂತೆ ತ್ರಿಪುರಾ ಪೂರ್ವ ಲೋಕಸಭಾ ಕ್ಷೇತ್ರದ ರೈಮಾ ವ್ಯಾಲಿ ವಿಧಾನಸಭಾ ಕ್ಷೇತ್ರದ ಸದಾಯಿ ಮೋಹನ್ ಪಾರಾ ಮತಗಟ್ಟೆಗೆ ಚುನಾವಣಾ ಸಿಬ್ಬಂದಿಯ ತಂಡ ತಲುಪಿದೆ’’ ಎಂದು ಗಂಡಚೇರ್ರಾ (ರೈಮಾ ವ್ಯಾಲಿ)ಉಪ ವಿಭಾಗೀಯ ದಂಡಾಧಿಕಾರಿ (ಎಸ್ಡಿಎಂ) ಅರಿಂದಂ ದಾಸ್ ಅವರು ಫೋನ್ ಮೂಲಕ ತಿಳಿಸಿದ್ದಾರೆ.
ಸರಕಾರದ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟಿಸುತ್ತಿರುವುದರಿಂದ ಗ್ರಾಮಸ್ತರು ಮತಗಟ್ಟೆಯ ಹೊರಗೆ ನಿಂತುಕೊಂಡಿದ್ದರು. ಮತ ಚಲಾಯಿಸಲು ಮತಗಟ್ಟೆ ಒಳಗೆ ಪ್ರವೇಶಿಸಲಿಲ್ಲ ಎಂದು ಅವರು ತಿಳಿಸಿದ್ದಾರೆ.