ಉತ್ತರ ಪ್ರದೇಶ | ಮಲಪುತ್ರಿಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದ ವ್ಯಕ್ತಿಯ ಬಂಧನ
ಸಾಂದರ್ಭಿಕ ಚಿತ್ರ
ಘಾಝಿಯಾಬಾದ್ : ತನ್ನಇಬ್ಬರು ಅಪ್ರಾಪ್ತ ಮಲಪುತ್ರಿಯರ ಮೇಲೆ ಅತ್ಯಾಚಾರವೆಸಗುತ್ತಿದ್ದ ಎಂಬ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಆರೋಪಿಯ ಪತ್ನಿ ನೀಡಿದ ದೂರನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ತನ್ನ ಹಿಂದಿನ ಪತಿಯ ಇಬ್ಬರು ಅಪ್ರಾಪ್ತ ಪುತ್ರಿಯರ ಮೇಲೆ ತನ್ನ ಪತಿ ಕಳೆದ ಆರು ತಿಂಗಳಿನಿಂದ ಅತ್ಯಾಚಾರವೆಸಗುತ್ತಿದ್ದಾನೆ ಎಂದು ಆರೋಪಿಯ ಪತ್ನಿಯು ಕವಿನಗರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕವಿನಗರ್ ಸಹಾಯಕ ಪೊಲೀಸ್ ಆಯುಕ್ತ ಅಭಿಷೇಕ್ ಶ್ರೀವಾಸ್ತವ್, “ಬುಧವಾರ ತನ್ನ ಪತಿ ತನ್ನ 14 ವರ್ಷದ ಪುತ್ರಿಯ ಮೇಲೆ ಅತ್ಯಾಚಾರವೆಸಗುರುವುದನ್ನು ಕಂಡೆ ಎಂದು ದೂರುದಾರ ಮಹಿಳೆಯು ಆರೋಪಿಸಿದ್ದಾಳೆ. ಕಳೆದ ಕೆಲವು ತಿಂಗಳಿನಿಂದ ನನ್ನ ಮಲತಂದೆ ನನ್ನ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು 16 ವರ್ಷದ ಹಿರಿಯ ಪುತ್ರಿ ಕೂಡಾ ಆರೋಪಿಸಿದ್ದಾಳೆ. ಈ ವಿಷಯವನ್ನು ಯಾರಲ್ಲೂ ಬಹಿರಂಗಪಡಿಸಬಾರದು ಎಂದು ಇಬ್ಬರೂ ಬಾಲಕಿಯರಿಗೆ ಆರೋಪಿಯು ಬೆದರಿಕೆ ಒಡ್ಡಿದ್ದಾನೆ” ಎಂದು ಹೇಳಿದ್ದಾರೆ.
ಈ ಕೃತ್ಯಕ್ಕೆ ನನ್ನ ಅತ್ತೆ ಸಹಕರಿಸಿದ್ದಾಳೆ ಎಂದೂ ದೂರುದಾರ ಮಹಿಳೆಯು ಆರೋಪಿಸಿದ್ದಾಳೆ ಎಂದು ಅವರು ಹೇಳಿದ್ದಾರೆ.
ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳು ಹಾಗೂ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನನ್ನು ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತನ್ನ ಮೊದಲ ಪತಿಯಿಂದ ವಿವಾಹ ವಿಚ್ಛೇದನವಾದ ನಂತರ ದೂರುದಾರ ಮಹಿಳೆಯು ಆರೋಪಿಯನ್ನು ಮರು ವಿವಾಹವಾಗಿದ್ದಳು ಎಂದು ಹೇಳಲಾಗಿದೆ.