'ಕೂದಲು ಬೆಳೆಯುವ ಎಣ್ಣೆ'ಗಾಗಿ ಸರತಿ ಸಾಲು: ಲಕ್ನೋದಲ್ಲಿ ಟ್ರಾಫಿಕ್ ಜಾಮ್
ಸಾಂದರ್ಭಿಕ ಚಿತ್ರ | PC: freepik
ಲಕ್ನೋ: ಬೊಕ್ಕತಲೆಯಲ್ಲಿ ʼಕೂದಲು ಬೆಳೆಯುವ ಎಣ್ಣೆʼಗಾಗಿ ಸರತಿ ಸಾಲಿನಲ್ಲಿ ನಿಂತು ಭಾರೀ ಟ್ರಾಫಿಕ್ ದಟ್ಟಣೆಯಾದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, 'ಮಿರಾಕಲ್ ಆಯಿಲ್' ಬಳಸಿದರೆ ತಲೆಗೂದಲು ಬೆಳೆಯುತ್ತದೆ ಎಂದು ಪತ್ರಿಕೆಗಳಲ್ಲಿ ಜಾಹಿರಾತು ಬಂದಿತ್ತು. ಎಣ್ಣೆ ಬಾಟಲಿ ಖರೀದಿಗೆ ರವಿವಾರ ಮತ್ತು ಸೋಮವಾರದಂದು ನಗರದ ಲಿಸಾದಿ ಗೇಟ್ ಬಳಿಯ ಬ್ಯಾಂಕೆಟ್ ಹಾಲ್ ಬಳಿ ಬರುವಂತೆ ಸೂಚಿಸಲಾಗಿತ್ತು.
ದಿಲ್ಲಿ ಮೂಲದ ಇಬ್ಬರು ಈ ಎಣ್ಣೆಯನ್ನು ಮಾರಾಟ ಮಾಡುತ್ತಿದ್ದರು, ಕೆಲವೇ ಹೊತ್ತಿನಲ್ಲಿ ಗ್ರಾಹಕರು ಎಣ್ಣೆ ಬಾಟಲಿಗಾಗಿ ಮುಗಿಬಿದ್ದಿದ್ದಾರೆ. ಇದರಿಂದ ಭಾರೀ ಸಂಚಾರ ದಟ್ಟಣೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಅಧಿಕಾರಿಗಳು, ಮಾಹಿತಿ ಕಲೆ ಹಾಕಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
Next Story