ವಾರಣಾಸಿ | ಪ್ರಿಯಾಂಕಾ ಸ್ಪರ್ಧಿಸಿದ್ದರೆ ಪ್ರಧಾನಿ ಮೋದಿ ಸೋಲುತ್ತಿದ್ದರು: ರಾಹುಲ್ ಗಾಂಧಿ
ಪ್ರಿಯಾಂಕಾ ಗಾಂಧಿ , ರಾಹುಲ್ ಗಾಂಧಿ | PTI
ರಾಯ್ಬರೇಲಿ: ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಚುನಾವಣೆಗೆ ಸ್ಪರ್ಧಿಸಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎರಡರಿಂದ ಮೂರು ಲಕ್ಷ ಮತಗಳ ಅಂತರದಿಂದ ಸೋಲಿಸುತ್ತಿದ್ದರು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ
ಮಂಗಳವಾರ ರಾಯ್ಬರೇಲಿಯಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಆಯೋಜಿಸಿದ್ದ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತನಾಡಿದರು. ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಕೂದಲೆಳೆಯ ಅಂತರದಿಂದ ತಮ್ಮನ್ನು ತಾವು ವಾರಣಾಸಿ ಕ್ಷೇತ್ರದಲ್ಲಿ ರಕ್ಷಿಸಿಕೊಂಡಿದ್ದಾರೆ. ಪ್ರಿಯಾಂಕ ಸ್ಪರ್ಧಿಸಿದ್ದರೆ ಮೋದಿಯವರು ಎರಡರಿಂದ ಮೂರು ಲಕ್ಷಗಳ ಅಂತರಿಂದ ಸೋಲುತ್ತಿದ್ದರು. ನಾನು ಅಹಂಕಾರದಿಂದ ಈ ಮಾತನ್ನು ಹೇಳುತ್ತಿಲ್ಲ. ಪ್ರಧಾನಿ ಮೋದಿಯವರ ಆಡಳಿತ ಸಾಮಾನ್ಯ ಜನರಿಗೆ ತೃಪ್ತಿ ನೀಡಿಲ್ಲ ಎಂಬ ಸಂದೇಶವನ್ನು ಸ್ವತಃ ಭಾರತದ ಜನರೇ ಚುನಾವಣೆಯಲ್ಲಿ ತಿಳಿಸಿದ್ದಾರೆ” ಎಂದರು.
#WATCH | Addressing a public gathering in Raebareli, Congress MP Rahul Gandhi says, "(BJP) lost the Ayodhya seat... Not only in Ayodhya, the Prime Minister has also saved his life in Varanasi... If my sister (Priyanka Gandhi) had contested from Varanasi, today the Prime Minister… pic.twitter.com/aEWHwaI80b
— ANI (@ANI) June 11, 2024
“ಆಯೋಧ್ಯೆಯಲ್ಲಿ ನಡೆದ ರಾಮ ಮಂದಿರದ ಪ್ರಾಣಪ್ರತಿಷ್ಠ ಸಮಾರಂಭದಲ್ಲಿ ಒಬ್ಬನೇ ಒಬ್ಬ ಸಾಮಾನ್ಯ ವ್ಯಕ್ತಿಗೆ ಭಾಗವಹಿಸಲು ಅವಕಾಶ ನೀಡಲಿಲ್ಲ. ದಲಿತರು, ಹಿಂದುಳಿದವರು ಯಾರಿಗೂ ಆಹ್ವಾನವಿರಲಿಲ್ಲ. ಬುಡಕಟ್ಟು ಸಮುದಾಯದ ಮಹಿಳೆ, ರಾಷ್ಟ್ರಪತಿಯವೂ ಭಾಗವಹಿಸಲಿಲ್ಲ. ಅಲ್ಲಿದ್ದವರು ಸಿನೆಮಾ ತಾರೆಗಳು, ಕ್ರಿಕೆಟ್ ಆಟಗಾರರು, ಶ್ರೀಮಂತ ಉದ್ಯಮಿಗಳು. ಅಂಬಾನಿಯವರೂ ಅಲ್ಲಿದ್ದರು. ಆದರೆ ಸಾಮಾನ್ಯ ಜನತೆ, ಬಡವ ಯಾರೂ ಅಲ್ಲಿರಲಿಲ್ಲ. ಅಯೋಧ್ಯೆಯ ಜನತೆ ಇದಕ್ಕೆ ಚುನಾವಣೆಯಲ್ಲಿ ಉತ್ತರ ನೀಡಿದ್ದಾರೆ” ಎಂದು ರಾಹುಲ್ ಗಾಂಧಿ ಗಮನ ಸೆಳೆದರು.