ವಸಂತ ಪಂಚಮಿ: ತ್ರಿವೇಣಿ ಸಂಗಮದಲ್ಲಿ ನಾಗ ಸಾಧುಗಳಿಂದ ಪವಿತ್ರ ಸ್ನಾನ

PC: x.com/MahaKumbh
ಪ್ರಯಾಗ್ ರಾಜ್: ಕುಂಭಮೇಳದ ಐದು ಪವಿತ್ರ ಅಮೃತಸ್ನಾನಗಳ ಪೈಕಿ ಮೂರನೇ ಸಂದರ್ಭವಾದ ವಸಂತ ಪಂಚಮಿಯಂದು ಸೋಮವಾರ ಅಪಾರ ಸಂಖ್ಯೆಯ ನಾಗಾ ಸಾಧುಗಳು ಪವಿತ್ರಸ್ನಾನ ಕೈಗೊಂಡರು. ಅಂತೆಯೇ ಜುನಾ ಅಖಾಡಾ ಸಂತರು ಕೂಡಾ ಪವಿತ್ರಸ್ನಾನದ ಸ್ಥಳಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಸೋಮವಾರ ನಸುಕಿನ 3.30ರ ವೇಳೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಇತರ ಉನ್ನತ ಅಧಿಕಾರಿಗಳ ಜತೆ ನಿಯಂತ್ರಣ ಕೊಠಡಿಯಿಂದ ಕುಂಭಮೇಳ ಪರಿಸ್ಥಿತಿಯ ಅವಲೋಕನ ನಡೆಸಿ, ಮಹತ್ವದ ಸೂಚನೆಗಳನ್ನು ನೀಡಿದರು.
ಜನವರಿ 29ರ ಕಾಲ್ತುಳಿತದ ಘಟನೆಯ ಬಳಿಕ ಸೋಮವಾರ ಮತ್ತೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಕುಂಭಮೇಳಕ್ಕೆ ಆಗಮಿಸಿದ್ದಾರೆ.
Next Story