ಚಂದ್ರಶೇಖರ್ ಆಝಾದ್ಗೆ ಗೆಲುವು
ಚಂದ್ರಶೇಖರ್ ಆಝಾದ್ | PC : PTI
ಲಕ್ನೋ : ದಲಿತ ನಾಯಕ ಹಾಗೂ ಅಝಾದ್ ಸಮಾಜ ಪಕ್ಷ (ಕಾನ್ಶಿ ರಾಮ್)ದ ಅಭ್ಯರ್ಥಿ ಚಂದ್ರಶೇಖರ್ ಅಝಾದ್ ಅವರು ಉತ್ತರಪ್ರದೇಶದ ನಾಗಿನಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಓಮ್ ಕುಮಾರ್ ಅವರನ್ನು 1.5 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.
ಚಂದ್ರಶೇಖರ್ ಅವರು 5,12,552 ಮತಗಳನ್ನು ಪಡೆದರೆ, ಓಂ ಕುಮಾರ್ ಅವರು 3,61,079 ಮತಗಳನ್ನು ಪಡೆದಿದ್ದಾರೆ. ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಸಮಾಜವಾದಿ ಪಕ್ಷದ ಮನೋಜ್ ಕುಮಾರ್ 1,02,374 ಮತಗಳನ್ನು ಗಳಿಸಿದ್ದಾರೆ ಹಾಗೂ ಬಿಎಸ್ಪಿ ಅಭ್ಯರ್ಥಿ ಸುರೇಂದ್ರ ಪಾಲ್ ಸಿಂಗ್ ಅವರು 13,277 ಮತಗಳನ್ನು ಪಡೆದುಕೊಂಡಿದ್ದಾರೆ.
2019ರಲ್ಲಿ ಈ ಕ್ಷೇತ್ರದಲ್ಲಿ ಬಿಎಸ್ಪಿಯ ಗಿರೀಶ್ ಚಂದ್ರ ಅವರು ಬಿಜೆಪಿ ಅಭ್ಯರ್ಥಿ ಯಶ್ವಂತ್ ಸಿಂಗ್ ಅವರನ್ನು 1,66,832 ಮತಗಳ ಅಂತರದಿಂದ ಸೋಲಿಸಿದ್ದರು.
Next Story