ವಿಜಯ್ ಹಝಾರೆ ಟ್ರೋಫಿ: ಕರ್ನಾಟಕ ತಂಡ ನಾಕೌಟ್ ಹಂತಕ್ಕೆ ಲಗ್ಗೆ
ಅಹ್ಮದಾಬಾದ್: ವಿಜಯ್ ಹಝಾರೆ ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ ಆರಂಭಿಕ ಆಟಗಾರ ಹಾರ್ವಿಕ್ ದೇಸಾಯಿ ಶತಕದ(114 ರನ್) ಹೊರತಾಗಿಯೂ ಸೌರಾಷ್ಟ್ರ ಕ್ರಿಕೆಟ್ ತಂಡ ಕರ್ನಾಟಕದ ವಿರುದ್ದ 60 ರನ್ ಅಂತರದಿಂದ ಸೋಲುಂಡಿದೆ.
ಈ ಫಲಿತಾಂಶದಿಂದಾಗಿ 6 ಪಂದ್ಯಗಳಲ್ಲಿ 5ನೇ ಗೆಲುವು ದಾಖಲಿಸಿ 20 ಅಂಕ ಗಳಿಸಿದ ಕರ್ನಾಟಕ ತಂಡ ಟೂರ್ನಿಯ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿದೆ.
ಶುಕ್ರವಾರ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ ತಂಡ ಕೆ.ವಿ. ಅನೀಶ್(93 ರನ್) ಹಾಗೂ ಮಯಾಂಕ್ ಅಗರ್ವಾಲ್(69 ರನ್ ) ಅರ್ಧಶತಕದ ಕೊಡುಗೆಯ ನೆರವಿನಿಂದ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 349 ರನ್ ಗಳಿಸಿತು.
ಗೆಲ್ಲಲು 350 ರನ್ ಗುರಿ ಬೆನ್ನಟ್ಟಿದ ಸೌರಾಷ್ಟ್ರ ತಂಡವು 47.5 ಓವರ್‌ಗಳಲ್ಲಿ 289 ರನ್ ಗಳಿಸಿ ಆಲೌಟಾಯಿತು. ವಿ. ಕೌಶಿಕ್(5-51)ಹಾಗೂ ಶ್ರೇಯಸ್ ಗೋಪಾಲ್(4-63) ಸೌರಾಷ್ಟ್ರ ತಂಡಕ್ಕೆ ಕಡಿವಾಣ ಹಾಕಿದರು.
Next Story