ಚಂದ್ರನ ಛಾಯಾಚಿತ್ರಗಳನ್ನು ಕಳುಹಿಸಿದ ವಿಕ್ರಮ್ ಲ್ಯಾಂಡರ್
Photo: PTI
ಹೊಸದಿಲ್ಲಿ: ಪ್ರೊಪಲ್ಶನ್ ಮೊಡ್ಯೂಲ್ ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟ ಬಳಿಕ ವಿಕ್ರಮ್ ಲ್ಯಾಂಡರ್ ನೌಕೆಯು ತೆಗೆದಿರುವ ಅಭೂತಪೂರ್ವ ಕಪ್ಪುಬಿಳುಪಿನ ಛಾಯಾಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ’ಎಕ್ಸ್’ (ಹಿಂದಿನ ಟ್ವಿಟರ್)ನಲ್ಲಿ ಹಂಚಿಕೊಂಡಿದೆ. ವಿಕ್ರಮ್ ಲ್ಯಾಂಡರ್ ನ ಕ್ಯಾಮರಾ -1 ತೆಗೆದಿರುವ ಈ ಛಾಯಾಚಿತ್ರಗಳು ಚಂದ್ರನಲ್ಲಿನ ವಿವಿಧ ಕುಳಿಗಳನ್ನು ತೋರಿಸಿವೆ. ಚಂದ್ರದಲ್ಲಿರುವ ಕಡಿಮೆ ವಯಸ್ಸಿನ ಬೃಹತ್ ಕುಳಿಗಳಲ್ಲಿ ಒಂದಾದ ಗಿಯೊರ್ಡಾನೊ ಬ್ರೂನೊ ಕ್ರೇಟರ್ನ ಛಾಯಾಚಿತ್ರಗಳು ಕೂಡಾ ಅವುಗಳಲ್ಲಿ ಒಳಗೊಂಡಿವೆ.
ವಿಕ್ರಮ್ ಲ್ಯಾಂಡರ್ನ ಎಲ್ಐ ಕ್ಯಾಮೆರಾವು ಅಂದಾಜು 43 ಕಿ.ಮೀ. ವ್ಯಾಸದ (ಡಯಾಮೀಟರ್) ಹಾರ್ಖೆಬಿ ಜೆ. ಕ್ರೇಟರ್ನ ಛಾಯಾಚಿತ್ರಗಳನ್ನು ಕೂಡಾ ಸೆರೆಹಿಡಿದಿದೆ.
ಚಂದ್ರನ ಕಕ್ಷೆಯಲ್ಲಿ ಪ್ರೊಪಲ್ಶನ್ ಮೊಡ್ಯೂಲ್ನಿಂದ ಯಶಸ್ವಿಯಾಗಿ ಬೇರ್ಪಟ್ಟ ಬಳಿಕ ವಿಕ್ರಮ್ ಲ್ಯಾಂಡರ್ ನೌಕೆಯು ಈ ಛಾಯಾಚಿತ್ರಗಳನ್ನು ತೆಗೆದಿದೆ.
Next Story