ಕೈಯಿಂದ ಮಲಗುಂಡಿ ಸ್ವಚ್ಛಗೊಳಿಸುವ ಪದ್ಧತಿ ನಿಂತಿದೆ: 100ಕ್ಕೂ ಅಧಿಕ ಜಿಲ್ಲೆಗಳಿಂದ ಘೋಷಣೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೈಯಿಂದ ಮಲಗುಂಡಿ ಸ್ವಚ್ಛಗೊಳಿಸುವ ಪದ್ಧತಿ ನಿಂತಿದೆ ಎಂಬುದಾಗಿ ಜುಲೈ 27ರಿಂದ ಆಗಸ್ಟ್ 2ರ ನಡುವಿನ ಏಳು ದಿನಗಳ ಅವಧಿಯಲ್ಲಿ ದೇಶಾದ್ಯಂತ 100ಕ್ಕೂ ಅಧಿಕ ಜಿಲ್ಲೆಗಳು ಘೋಷಿಸಿಕೊಂಡಿವೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಲೋಕಸಭೆಗೆ ತಿಳಿಸಿದೆ.
ಅದೇ ವೇಳೆ, ಈ ಪದ್ಧತಿಯನ್ನು ಕೊನೆಗೊಳಿಸುವ ಪ್ರಕ್ರಿಯೆಯನ್ನು ಇನ್ನೂ ಪೂರ್ಣಗೊಳಿಸದ ಜಿಲ್ಲೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಸಚಿವಾಲಯ ಹೇಳಿತು.
ಆಗಸ್ಟ್ 2ರ ವೇಳೆಗೆ, ಕೈಯಿಂದ ಮಲಗುಂಡಿ ಸ್ವಚ್ಛಗೊಳಿಸುವ ಪದ್ಧತಿಯಿಂದ ಸಂಪೂರ್ಣ ಮುಕ್ತವಾಗಿರುವುದಾಗಿ ಒಟ್ಟು 639 ಜಿಲ್ಲೆಗಳು ಸ್ವಘೋಷಣೆಗಳನ್ನು ಸಲ್ಲಿಸಿವೆ ಎಂದು ಅದು ತಿಳಿಸಿದೆ. ದೇಶದಲ್ಲಿ ಕೈಯಿಂದ ಮಲಗುಂಡಿ ಸ್ವಚ್ಛಗೊಳಿಸುವ ಪದ್ಧತಿಯನ್ನು ನಿಷೇಧಿಸಲಾಗಿದೆ.
ಜುಲೈ 26ರ ವೇಳೆಗೆ, ಇಂಥ ಘೋಷಣೆ ಮಾಡದ ಜಿಲ್ಲೆಗಳು ಜಮ್ಮು ಮತ್ತು ಕಾಶ್ಮೀರ, ಮಣಿಪುರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ.
Next Story