ಜಂಟಿ ಸಂಸದೀಯ ಸಮಿತಿಯಿಂದ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ; 14 ತಿದ್ದುಪಡಿಗಳಿಗೆ ಅನುಮೋದನೆ

Photo: NDTV
ಹೊಸದಿಲ್ಲಿ: ಕಳೆದ ವರ್ಷ ಆಗಸ್ಟ್ನಲ್ಲಿ ಸದನದಲ್ಲಿ ಮಂಡಿಸಲಾದ ವಕ್ಫ್ ತಿದ್ದುಪಡಿ ಮಸೂದೆಯ ಕರಡಿನಲ್ಲಿ 14 ತಿದ್ದುಪಡಿಗಳೊಂದಿಗೆ ಜಂಟಿ ಸಂಸದೀಯ ಸಮಿತಿಯು ಸೋಮವಾರ ಅಂಗೀಕರಿಸಿತು.
ಆಡಳಿತಾರೂಢ ಬಿಜೆಪಿಯ ಜಗದಾಂಬಿಕಾ ಪಾಲ್ ನೇತೃತ್ವದ ಸಮಿತಿಯಲ್ಲಿ ವಿರೋಧ ಪಕ್ಷದ ಸಂಸದರು 44 ತಿದ್ದುಪಡಿಗಳನ್ನು ಪ್ರಸ್ತಾಪಿಸಿದ್ದರು. ಆದರೆ ಅವೆಲ್ಲವನ್ನೂ ತಿರಸ್ಕರಿಸಲಾಯಿತು.
Next Story