ವಕ್ಫ್ ಮಸೂದೆ ಜಂಟಿ ಸಮಿತಿ | ಅಧ್ಯಕ್ಷರಾಗಿ ಬಿಜೆಪಿಯ ಜಗದಾಂಬಿಕಾ ಪಾಲ್ ನೇಮಕ
ಜಗದಾಂಬಿಕಾ ಪಾಲ್ | PC : PTI
ಹೊಸದಿಲ್ಲಿ : ಹಿರಿಯ ಬಿಜೆಪಿ ಲೋಕಸಭಾ ಸದಸ್ಯ ಜಗದಂಬಿಕಾ ಪಾಲ್ ಅವರನ್ನು ವಿವಾದಾಸ್ಪದ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸಲಿರುವ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರನ್ನಾಗಿ ನೇಮಕಗೊಳಿಸಿ ಅಧಿಸೂಚನೆಯನ್ನು ಲೋಕಸಭೆಯು ಮಂಗಳವಾರ ಹೊರಡಿಸಿದೆ.
ಸ್ಪೀಕರ್ ಓಂ ಬಿರ್ಲಾ ಅವರು 31 ಸದಸ್ಯರ ಸಮಿತಿಯ ಅಧ್ಯಕ್ಷರನ್ನಾಗಿ ಪಾಲ್ ಅವರನ್ನು ಹೆಸರಿಸಿದ್ದಾರೆ ಎಂದು ಅಧಿಕೃತ ಅಧಿಸೂಚನೆಯು ತಿಳಿಸಿದೆ.
ಮಸೂದೆಯಲ್ಲಿಯ ನಿಬಂಧನೆಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಪ್ರತಿಭಟನೆಗಳ ಬಳಿಕ ಅದನ್ನು ಉಭಯ ಸದನಗಳ ಜಂಟಿ ಸಮಿತಿಯ ಪರಿಶೀಲನೆಗೆ ಸಲ್ಲಿಸಲು ಸರಕಾರವು ನಿರ್ಧರಿಸಿತ್ತು. 21 ಲೋಕಸಭಾ ಮತ್ತು 10 ರಾಜ್ಯಸಭಾ ಸದಸ್ಯನ್ನು ಒಳಗೊಂಡಿರುವ ಸಮಿತಿಯು ಮುಂದಿನ ಅಧಿವೇಶನದೊಳಗೆ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.
Next Story