ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 'ಅತ್ಯಾಚಾರ ವಿರೋಧಿ ಮಸೂದೆ' ಸರ್ವಾನುಮತದಿಂದ ಅಂಗೀಕಾರ
Screengrab:X/ANI
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯು ಇಂದು ಹೊಸದಾಗಿ ಪ್ರಸ್ತಾಪಿಸಿದ 'ಅತ್ಯಾಚಾರ ವಿರೋಧಿ ಮಸೂದೆ'ಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ.
ಬಿಜೆಪಿ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಮಸೂದೆಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸಿದ್ದಾರೆ, ಅದನ್ನು ಸದನವು ಅದನ್ನು ಅಂಗೀಕರಿಸಲಿಲ್ಲ.
ಕಳೆದ ತಿಂಗಳು ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ-ಕೊಲೆಯಾದ ಹಿನ್ನೆಲೆಯಲ್ಲಿ ಟಿಎಂಸಿ ಸರ್ಕಾರ ಎರಡು ದಿನಗಳ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆದಿದೆ.
ಇಂದು ಬೆಳಿಗ್ಗೆ ಮಸೂದೆಯನ್ನು ಮಂಡಿಸಿದ ನಂತರ, ಸಿಎಂ ಮಮತಾ ಬ್ಯಾನರ್ಜಿ ಮಸೂದೆಯ ಪರ ಮಾತನಾಡಿದರು ಮತ್ತು ಮಸೂದೆಯನ್ನು "ಮಾದರಿ ಮತ್ತು ಐತಿಹಾಸಿಕ" ಎಂದು ಶ್ಲಾಘಿಸಿದ್ದಾರೆ. ವಿಧೇಯಕ ಕಾನೂನಾಗಿ ರೂಪುಗೊಂಡ ನಂತರ ರಾಜ್ಯ ಪೊಲೀಸರ ವಿಶೇಷ ಘಟಕ ''ಅಪರಾಜಿತಾ ಟಾಸ್ಕ್ ಫೋರ್ಸ್' ನ್ನು ರಚಿಸಲಾಗುವುದು ಎಂದು ಅವರು ಹೇಳಿದ್ದಾರೆ.
Next Story