ಪಶ್ಚಿಮಬಂಗಾಳ: ಈಡಿ ಅಧಿಕಾರಿಗಳಿಗೆ ಹಲ್ಲೆ ; ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಕಾಂಗ್ರೆಸ್ ಆಗ್ರಹ
Photo: ANI
ಕೋಲ್ಕತಾ: ಜಾರಿ ನಿರ್ದೇಶನಾಲಯ (ಈಡಿ)ದ ಅಧಿಕಾರಿಗಳು ಪಶ್ಚಿಮಬಂಗಾಳದಲ್ಲಿ ದಾಳಿ ನಡೆಸಿದ ಸಂದರ್ಭ ಟಿಎಂಸಿ ನಾಯಕನ ಬೆಂಬಲಿಗರಿಂದ ಹಲ್ಲೆಗೊಳಗಾದ ಘಟನೆ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿದೆ.
ಈ ನಡುವೆ ರಾಜ್ಯಪಾಲ ಸಿ.ವಿ. ಆನಂದ ಬೋಸ್, ಅನಾಗರಿಕತೆಯನ್ನು ಹತ್ತಿಕ್ಕುವುದು ಸರಕಾರದ ಕರ್ತವ್ಯ ಪಶ್ಚಿಮಬಂಗಾಳ ‘ಬನಾನ ರಿಪಬ್ಲಿಕ್’ ಅಲ್ಲ ಎಂದು ಹೇಳಿದ್ದಾರೆ. ಪಡಿತರ ವಿತರಣೆ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ನಡೆಸಿದ ಹಲ್ಲೆ ಒಕ್ಕೂಟ ವ್ಯವಸ್ಥೆಯ ಮೇಲಿನ ನೇರ ದಾಳಿ ಎಂದು ಬಿಜೆಪಿ ಬಣ್ಣಿಸಿದೆ.
ಆದರೆ, ಟಿಎಂಸಿ ಆರೋಪಗಳನ್ನು ನಿರಾಕರಿಸಿದೆ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸ್ಥಳೀಯರನ್ನು ಪ್ರಚೋದಿಸಿದ್ದಾರೆ ಎಂದು ಪ್ರತಿಪಾದಿಸಿದೆ.
Next Story