ಇದ್ದಕ್ಕಿದ್ದಂತೆ ಇಂಡಿಯಾ ಎಂದು ಕರೆಯಬಾರದು ಎನ್ನಲು ಕಾರಣವೇನು? : ಮಮತಾ ಪ್ರಶ್ನೆ
ಮಮತಾ ಬ್ಯಾನರ್ಜಿ | Photo : PTI
ಕೋಲ್ಕತ್ತಾ: ಇಂಡಿಯಾ ಎಂದರೆ ಭಾರತ ಎಂದು ಪ್ರತಿಪಾದಿಸಿದ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಇದ್ದಕ್ಕಿದ್ದಂತೆ, ದೇಶವನ್ನು ಭಾರತ ಎಂಬುದಾಗಿ ಮಾತ್ರವೇ ಕರೆಯಬೇಕೆಂದು ಹೇಳಲು ಕಾರಣವೇನು ಎಂದವರು ಪ್ರಶ್ನಿಸಿದರು.
ಜಿ20 ಔತಣಕೂಟಕ್ಕೆ ಭಾರತದ ರಾಷ್ಟ್ರಪತಿ ಎಂಬ ಹೆಸರಿನಲ್ಲಿ ಆಹ್ವಾನಿತರಿಗೆ ಆಮಂತ್ರಣ ಪತ್ರವನ್ನು ನೀಡಿದ್ದರ ಬಗ್ಗೆ ಉಂಟಾದದ ವಿವಾದದ ಬಗ್ಗೆ ಅವರು ಪ್ರತಿಕ್ರಿಯಿಸುತ್ತಿದ್ದರು.
‘‘ಭಾರತದ ಹೆಸರನ್ನು ಬದಲಾಯಿಸಿರುವುದನ್ನು ನಾನು ಕೇಳಿದ್ದೇನೆ. ಗೌರವಾನ್ವಿತ ರಾಷ್ಟ್ರಪತಿಯವರ ಹೆಸರಿನಲ್ಲಿಯೂ ಭಾರತವೆಂದು ಬರೆಯಲಾಗಿದೆ. ನಾವು ದೇಶವನ್ನು ಭಾರತವೆಂದೇ ಕರೆಯುತ್ತೇವೆ?’’ ಅದರಲ್ಲಿ ಹೊಸದೇನಿದೆ. ಇಂಗ್ಲೀಷ್ನಲ್ಲಿ ನಾವು ಇಂಡಿಯಾ ಎಂದೇ ಹೇಳುತ್ತೇವೆ. ಇದರಲ್ಲಿ ಹೊಸತೇನೂ ಇಲ್ಲ. ಇಡೀ ಜಗತ್ತಿಗೆ ನಾವು ಇಂಡಿಯಾ ಎಂಬುದಾಗಿಯೇ ಪರಿಚಿತರಾಗಿದ್ದೇವೆ. ದೇಶದ ಹೆಸರು ಹೀಗೆ ಆಕಸ್ಮಿಕವಾಗಿ ಬದಲಾಗುವುದಕ್ಕೆ ಅಂತಹ ಘಟನೆ ಏನು ಸಂಭವಿಸಿದೆ? ಎಂದು ಮಮತಾ ಪ್ರಶ್ನಿಸಿದರು.
Next Story