3 ವರ್ಷಗಳ ಕಾಲ ಅವರೇನು ಮಾಡುತ್ತಿದ್ದರು?: ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಪ್ರಶ್ನೆ
ವಿಧೇಯಕಗಳಿಗೆ ಒಪ್ಪಿಗೆ ನೀಡುವಲ್ಲಿ ವಿಳಂಬ
ತಮಿಳುನಾಡು ರಾಜ್ಯಪಾಲ ಸಿ ಎನ್ ರವಿ (PTI)
"What Was Governor Doing For 3 Years?" Supreme Court On Tamil Nadu Bills
ಹೊಸದಿಲ್ಲಿ: ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ನೀಡಲು ಅಲ್ಲಿನ ರಾಜ್ಯಪಾಲರು ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಇಂದು ತಮಿಳುನಾಡು ರಾಜ್ಯಪಾಲರ ಮುಂದೆ ಕೆಲ ಮಹತ್ವದ ಪ್ರಶ್ನೆಗಳನ್ನಿಟ್ಟಿದೆ.
“ಈ ಮಸೂದೆಗಳು 2020ರಿಂದ ಬಾಕಿ ಇವೆ. ಮೂರು ವರ್ಷ ಅವರೇನು ಮಾಡುತ್ತಿದ್ದರು?” ಎಂದು ತಮಿಳುನಾಡು ರಾಜ್ಯಪಾಲರನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ರಾಜ್ಯಪಾಲ ಸಿ ಎನ್ ರವಿ ಅವರು ತಮ್ಮ ಬಳಿ ಬಾಕಿ ಇದ್ದ 10 ಮಸೂದೆಗಳನ್ನು ವಾಪಸ್ ಕಳುಹಿಸಿದ ವಿದ್ಯಮಾನದ ಕುರಿತಂತೆ ಸುಪ್ರೀಂ ಕೋರ್ಟ್ ಈ ಪ್ರಶ್ನೆಯನ್ನೆತ್ತಿದೆ. ಈ 10 ಮಸೂದೆಗಳಲ್ಲಿ ಎರಡು ಮಸೂದೆಗಳನ್ನು ರಾಜ್ಯದಲ್ಲಿ ಈ ಹಿಂದೆ ಆಡಳಿತದಲ್ಲಿದ್ದ ಎಐಎಡಿಎಂಕೆ ಸರ್ಕಾರದ ಅವಧಿಯ ವೇಳೆ ವಿಧಾನಸಭೆ ಅಂಗೀಕರಿಸಿತ್ತು.
Next Story