ಅಸ್ಸಾಂನ ಕಝಿರಂಗ ನ್ಯಾಷನಲ್ ಪಾರ್ಕ್ಗೆ ಭೇಟಿ ನೀಡಿದ ಮೋದಿ; ಮಣಿಪುರಕ್ಕೆ ಭೇಟಿ ನೀಡಲು ಪ್ರಧಾನಿಗೆ ಏಕೆ ಸಮಯ ಸಿಕ್ಕಿಲ್ಲ ಎಂದು ಪ್ರಶ್ನಿಸಿದ ಕಾಂಗ್ರೆಸ್
Photo:X/@narendramodi
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂನ ಕಝಿರಂಗ ನ್ಯಾಷನಲ್ ಪಾರ್ಕ್ಗೆ ಭೇಟಿ ನೀಡಿರುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪಕ್ಷ, ಹಿಂಸಾಪೀಡಿತ ಮಣಿಪುರಕ್ಕೆ ಪ್ರಧಾನಿ ಇಲ್ಲಿಯವರೆಗೂ ಏಕೆ ಭೇಟಿ ನೀಡಿಲ್ಲ ಎಂದು ಪ್ರಶ್ನಿಸಿದೆ. ಪ್ರಧಾನಿ ಶನಿವಾರ ಬೆಳಿಗ್ಗೆ ಕಝಿರಂಗ ನ್ಯಾಷನಲ್ ಪಾರ್ಕ್ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಮತ್ತು ಜೀಪ್ ಸಫಾರಿ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ ಜೈರಾಂ ರಮೇಶ್ “ಪ್ರಧಾನಿ ತಮ್ಮ ವಿವಿಧ ಪ್ರಯಾಣಗಳ ನಡುವೆ ಕಝಿರಂಗ ಪಾರ್ಕ್ಗೆ ಭೇಟಿ ನೀಡಲು ಸಮಯ ಮಾಡಿಕೊಂಡಿದ್ದು ಖುಷಿ ನೀಡಿದೆ. ಈ ಪಾರ್ಕ್ ಕುರಿತಂತೆ ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಬಹಳಷ್ಟು ಆಸಕ್ತಿ ತೋರಿದ್ದರು ಎಂದು ಹೇಳಿದ್ದಾರೆ.
“ದೇಶಾದ್ಯಂತ ಪ್ರಚಾರ ಮಾಡಲು ತೆರಿಗೆದಾರರ ಹಣವನ್ನು ಸಾಮಾನ್ಯವಾಗಿ ಪೋಲು ಮಾಡಿವ ಪ್ರಧಾನಿಗೆ ಮಣಿಪುರಕ್ಕೆ ಭೇಟಿ ನೀಡಲು ಏಕೆ ಇನ್ನೂ ಸಮಯ ಸಿಕ್ಕಿಲ್ಲ, ಅಥವಾ ಏಕೆ ರಾಜ್ಯದ ಮುಖ್ಯಮಂತ್ರಿ ಹಾಗೂ ರಾಜಕೀಯ ಪಕ್ಷಗಳ ಜೊತೆ ಮಾತನಾಡಿಲ್ಲ, ಇಂಫಾಲಕ್ಕೆ ತೆರಳಲು ಭಾರತದ ಜನರು ಟಿಕೆಟ್ ಖರೀದಿಸಬೇಕೆಂದು ಅವರು ಕಾಯುತ್ತಿದ್ದಾರೆಯೇ?” ಎಂದು ಜೈರಾಂ ರಮೇಶ್ ಪ್ರಶ್ನಿಸಿದರು.
লক্ষীমাই, প্ৰদ্যুম্ন আৰু ফুলমাইক কুঁহিয়াৰ খুৱালো। কাজিৰঙা বিশেষকৈ গঁড়ৰ বাবে জনাজাত যদিও তাত বহুসংখ্যক হাতীৰ লগতে আন কেইবা প্ৰজাতিৰ জীৱ-জন্তু আছে। pic.twitter.com/PWODXTPe5T
— Narendra Modi (@narendramodi) March 9, 2024