Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸಹಬಾಳ್ವೆಯ ಆದೇಶವನ್ನು ಪಾಲಿಸದಿದ್ದರೂ...

ಸಹಬಾಳ್ವೆಯ ಆದೇಶವನ್ನು ಪಾಲಿಸದಿದ್ದರೂ ಪತಿಯಿಂದ ಜೀವನಾಂಶಕ್ಕೆ ಪತ್ನಿ ಅರ್ಹ: ಸುಪ್ರೀಂ ಕೋರ್ಟ್

ವಾರ್ತಾಭಾರತಿವಾರ್ತಾಭಾರತಿ12 Jan 2025 3:08 PM IST
share
Photo of Supreme court of India

ಹೊಸದಿಲ್ಲಿ: ಮಹತ್ವದ ತೀರ್ಪೊಂದರಲ್ಲಿ ಸರ್ವೋಚ್ಚ ನ್ಯಾಯಾಲಯವು, ಮಹಿಳೆಯು ತನ್ನ ಪತಿಯೊಂದಿಗೆ ಸಹಬಾಳ್ವೆಯನ್ನು ನಿರಾಕರಿಸಲು ಸಾಕಷ್ಟು ಮಾನ್ಯವಾದ ಕಾರಣಗಳನ್ನು ಹೊಂದಿದ್ದರೆ ಸಂಗಾತಿಯೊಂದಿಗೆ ವಾಸವಿರಬೇಕೆಂಬ ಆದೇಶವನ್ನು ಪಾಲಿಸದಿದ್ದರೂ ಆಕೆಗೆ ಪತಿಯಿಂದ ಜೀವನಾಂಶದ ಹಕ್ಕನ್ನು ನೀಡಬಹುದು ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಮತ್ತು ನ್ಯಾ.ಸಂಜಯ್ ಕುಮಾರ್ ಅವರ ಪೀಠವು,‌ ವೈವಾಹಿಕ ಹಕ್ಕುಗಳ ಮರುಸ್ಥಾಪನೆಗಾಗಿ ಆದೇಶವನ್ನು ಪತಿಯು ಪಡೆದುಕೊಂಡಿದ್ದರೂ ಪತ್ನಿಯು ಅದಕ್ಕೆ ವಿಧೇಯಳಾಗಲು ನಿರಾಕರಿಸಿದರೆ ಮತ್ತು ಪತಿಯ ಮನೆಗೆ ಮರಳಿದರೆ ಜೀವನಾಂಶವನ್ನು ಪಡೆಯುವ ಆಕೆಯ ಹಕ್ಕು ರದ್ದಾಗುವುದಿಲ್ಲ ಎಂದು ಹೇಳಿ ಅರ್ಜಿಯನ್ನು ವಿಲೇವಾರಿಗೊಳಿಸಿತು.

ಸಿಆರ್‌ಪಿಸಿಯ ಕಲಂ 125(4)ರಡಿ,ವೈವಾಹಿಕ ಹಕ್ಕುಗಳ ಮರುಸ್ಥಾಪನೆಯ ಆದೇಶವನ್ನು ಪತ್ನಿಯು ಪಾಲಿಸದಿದ್ದರೆ ಅದು ಆಕೆಗೆ ಜೀವನಾಂಶವನ್ನು ನಿರಾಕರಿಸಲು ಸೂಕ್ತ ಕಾರಣವಾಗುತ್ತದೆಯೇ ಎಂಬ ಪ್ರಶ್ನೆಯನ್ನು ವಿವಿಧ ಉಚ್ಚ ನ್ಯಾಯಾಲಯಗಳು ಬಗೆಹರಿಸಿವೆ,ಆದರೆ ವಿಭಿನ್ನ ಮತ್ತು ವಿರೋಧಾತ್ಮಕ ಅಭಿಪ್ರಾಯಗಳಿಂದಾಗಿ ಈ ವಿಷಯದಲ್ಲಿ ಸ್ಥಿರವಾದ ದೃಷ್ಟಿಕೋನ ಮೂಡಿಬಂದಿಲ್ಲ ಎಂದು ಹೇಳಿದ ಪೀಠವು,ಹೀಗಾಗಿ ನ್ಯಾಯಾಂಗದ ಚಿಂತನೆಯು ಸಿಆರ್‌ಪಿಸಿಯ ಕಲಂ 125(4)ರಡಿ ಜೀವನಾಂಶವನ್ನು ಪಡೆಯುವ ಪತ್ನಿಯ ಹಕ್ಕನ್ನು ಎತ್ತಿ ಹಿಡಿಯುವ ಪರವಾಗಿಯೇ ಇರುತ್ತದೆ. ಕೇವಲ ಪತಿಯ ಕೋರಿಕೆಯ ಮೇರೆಗೆ ಸಹಬಾಳ್ವೆಗೆ ಆದೇಶ ಹೊರಡಿಸುವುದರಿಂದ ಮತ್ತು ಪತ್ನಿಯು ಅದನ್ನು ಪಾಲಿಸದಿರುವುದು ಆಕೆಯನ್ನು ಜೀವನಾಂಶದ ಹಕ್ಕಿನಿಂದ ಅನರ್ಹಗೊಳಿಸಲು ಸಾಲುವುದಿಲ್ಲ ಎಂದು ಹೇಳಿತು.

ಪ್ರತ್ಯೇಕವಾಗಿ ವಾಸವಾಗಿರುವ ಜಾರ್ಖಂಡ್‌ನ ದಂಪತಿಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ. ದಂಪತಿ 2014,ಮೇ 1ರಂದು ಮದುವೆಯಾಗಿದ್ದರು,ಆದರೆ ಆಗಸ್ಟ್ 2015ರಲ್ಲಿ ಪ್ರತ್ಯೇಕಗೊಂಡಿದ್ದರು.

ಪತ್ನಿ ಆ.21,2015ರಂದು ಮನೆ ಬಿಟ್ಟು ಹೋಗಿದ್ದು ಆಕೆಯನ್ನು ಮರಳಿ ಕರೆತರುವ ಎಲ್ಲ ಪ್ರಯತ್ನಗಳು ವಿಫಲಗೊಂಡಿವೆ ಎಂದು ರಾಂಚಿಯ ಕುಟುಂಬ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದ ಪತಿ ತನ್ನ ವೈವಾಹಿಕ ಹಕ್ಕುಗಳ ಮರುಸ್ಥಾಪನೆಗೆ ಕೋರಿಕೊಂಡಿದ್ದ. ನ್ಯಾಯಾಲಯಕ್ಕೆ ಸಲ್ಲಿಸಿದ್ದ ಲಿಖಿತ ಅರ್ಜಿಯಲ್ಲಿ ಪತ್ನಿ ತನ್ನ ಪತಿ ದ್ವಿಚಕ್ರ ವಾಹನ ಖರೀದಿಗಾಗಿ ಐದು ಲ.ರೂ.ಗಳಿಗೆ ಆಗ್ರಹಿಸಿದ್ದು,ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ. ಆತ ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾನೆ ಮತ್ತು ತನಗೆ ಗರ್ಭಪಾತವಾದಾಗ ತನ್ನನ್ನು ವಿಚಾರಿಸಲೂ ಬಂದಿರಲಿಲ್ಲ ಎಂದು ಆರೋಪಿಸಿದ್ದಳು.

ಮನೆಯಲ್ಲಿ ತನಗೆ ಪ್ರತ್ಯೇಕ ವಾಷ್‌ರೂಮ್ ಒದಗಿಸಿದರೆ ಮತ್ತು ಅಡಿಗೆ ಮಾಡಿಕೊಳ್ಳಲು ಎಲ್‌ಪಿಜಿ ಸ್ಟವ್ ಬಳಕೆಗೆ ಅವಕಾಶ ನೀಡಿದರೆ ತಾನು ಪತಿಯ ಮನೆಗೆ ಮರಳಲು ಸಿದ್ಧಳಿದ್ದೇನೆ ಎಂದು ಪತ್ನಿ ಹೇಳಿದ್ದಳು.

ಕುಟುಂಬ ನ್ಯಾಯಾಲಯವು ಮಾ.23,2022ರಂದು ಪತಿಯ ವೈವಾಹಿಕ ಹಕ್ಕುಗಳ ಮರುಸ್ಥಾಪನೆಗೆ ತೀರ್ಪು ಹೊರಡಿಸಿತ್ತು. ಆದರೆ ಪತ್ನಿ ಇದನ್ನು ಪಾಲಿಸಿರಲಿಲ್ಲ ಮತ್ತು ಜೀವನಾಂಶವನ್ನು ಕೋರಿ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು.

ಪತ್ನಿಗೆ ಮಾಸಿಕ 10,000 ರೂ.ಜೀವನಾಂಶ ನೀಡುವಂತೆ ಕುಟುಂಬ ನ್ಯಾಯಾಲಯವು ಪತಿಗೆ ಅದೇಶಿಸಿತ್ತು. ಪತಿ ಇದನ್ನು ಜಾರ್ಖಂಡ್ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ. ಕುಟುಂಬ ನ್ಯಾಯಾಲಯವು ಪತಿಯ ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸಿದ್ದರೂ ಪತ್ನಿ ಆತನ ಮನೆಗೆ ಮರಳಿರಲಿಲ್ಲ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡ ಉಚ್ಚ ನ್ಯಾಯಾಲಯವು ಆಕೆ ಜೀವನಾಂಶಕ್ಕೆ ಅರ್ಹಳಲ್ಲ ಎಂದು ತೀರ್ಪು ನೀಡಿತ್ತು. ಪತ್ನಿ ಇದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಳು.

ಉಚ್ಚ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿದ ಸರ್ವೋಚ್ಚ ನ್ಯಾಯಾಲಯವು ಕುಟುಂಬ ನ್ಯಾಯಾಲಯದ ಜೀವನಾಂಶ ಆದೇಶವನ್ನು ಎತ್ತಿ ಹಿಡಿದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X