ಎಎಪಿ ಚುನಾಯಿಸಿದರೆ ಮತ್ತೆ ಜೈಲಿಗೆ ಹೋಗಬೇಕಿಲ್ಲ : ಅರವಿಂದ್ ಕೇಜ್ರಿವಾಲ್
ಕೇಜ್ರಿವಾಲ್ ಅವರು ಪಂಜಾಬ್ ಸಿಎಂ ಭಗವಂತ್ ಮಾನ್ ಅವರೊಂದಿಗೆ ಹೊಸದಿಲ್ಲಿ ಲೋಕಸಭಾ ಕ್ಷೇತ್ರದ ಆಪ್ ಅಭ್ಯರ್ಥಿ ಸೋಮನಾಥ್ ಭಾರ್ತಿ ಅವರ ಪರವಾಗಿ ಮೋತಿ ನಗರದಲ್ಲಿ ರೋಡ್ ಶೋ (PC : PTI)
ಹೊಸದಿಲ್ಲಿ : "20 ದಿನಗಳ ನಂತರ ನಾನು ಮತ್ತೆ ಜೈಲಿಗೆ ಹೋಗಬೇಕಾಗಿದೆ. ನೀವು ಪೊರಕೆ (ಎಎಪಿಯ ಚಿಹ್ನೆ) ಆಯ್ಕೆ ಮಾಡಿದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ" ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಮಧ್ಯಂತರ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಹೊರಬಂದ ಕೇಜ್ರಿವಾಲ್ ಅವರು ರವಿವಾರ ಪಂಜಾಬ್ ಸಿಎಂ ಭಗವಂತ್ ಮಾನ್ ಅವರೊಂದಿಗೆ ಹೊಸದಿಲ್ಲಿ ಲೋಕಸಭಾ ಕ್ಷೇತ್ರದ ಆಪ್ ಅಭ್ಯರ್ಥಿ ಸೋಮನಾಥ್ ಭಾರ್ತಿ ಅವರ ಪರವಾಗಿ ಮೋತಿ ನಗರದಲ್ಲಿ ರೋಡ್ ಶೋ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಾನು ನಿಮಗಾಗಿ ಕೆಲಸ ಮಾಡಿದ್ದರಿಂದ ಅವರು ನನ್ನನ್ನು ಜೈಲಿಗೆ ಕಳುಹಿಸಿದ್ದಾರೆ, ದಿಲ್ಲಿ ಜನರ ಕೆಲಸ ಮಾಡುವುದನ್ನು ಬಿಜೆಪಿ ಬಯಸುವುದಿಲ್ಲ. ನಾನು ಮತ್ತೆ ಜೈಲಿಗೆ ಹೋದರೆ ಬಿಜೆಪಿಯವರು ನಿಮ್ಮ ಕೆಲಸವನ್ನು ನಿಲ್ಲಿಸುತ್ತಾರೆ, ಉಚಿತ ವಿದ್ಯುತ್, ಶಾಲೆಗಳನ್ನು ಹಾಳು ಮಾಡುತ್ತಾರೆ ಮತ್ತು ಆಸ್ಪತ್ರೆಗಳು ಮತ್ತು ಮೊಹಲ್ಲಾ ಕ್ಲಿನಿಕ್ಗಳನ್ನು ಮುಚ್ಚುತ್ತಾರೆ”, ಎಂದು ಅವರು ಹೇಳಿದರು.