2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ದೇಶವನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ: ನಿರ್ಮಲಾ ಸೀತಾರಾಮನ್
"ನಾವು ಫಲಿತಾಂಶದ ಕಡೆ ಗಮನ ನೀಡುತ್ತೇವೆಯೇ ಹೊರತು ವೆಚ್ಚದ ಕುರಿತಲ್ಲ"
Photo: PTI
ಹೊಸ ದಿಲ್ಲಿ: 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಗುರುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
2024-25ರ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ ನಿರ್ಮಲಾ ಸೀತಾರಾಮನ್, ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿತವಾಗಿ ಹಾಗೂ ಸಮರ್ಪಕವಾಗಿ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಸರ್ಕಾರವೊಂದಕ್ಕೆ ಸಾಮಾಜಿಕ ನ್ಯಾಯವೇ ಪರಿಣಾಮಕಾರಿ ಮತ್ತು ಅನಿವಾರ್ಯ ಮಾದರಿ ಎಂದೂ ಅವರು ಅಭಿಪ್ರಾಯ ಪಟ್ಟರು.
ಸರ್ಕಾರವು ವ್ಯವಸ್ಥಿತ ಅಸಮತೋಲನದ ಕುರಿತು ಗಮನ ಹರಿಸಿದ್ದು, ಅದರ ಪರಿಣಾಮವಾಗಿ ಸಮಾಜೋ ಆರ್ಥಿಕ ಪರಿವರ್ತನೆಯನ್ನು ಸಾಧಿಸಲಾಗಿದೆ ಎಂದು ಅವರು ಹೇಳಿದರು.
“ನಾವು ಫಲಿತಾಂಶದ ಕಡೆ ಗಮನ ನೀಡುತ್ತೇವೆಯೇ ಹೊರತು ವೆಚ್ಚದ ಕುರಿತಲ್ಲ” ಎಂದೂ ನಿರ್ಮಲಾ ಸೀತಾರಾಮನ್ ಹೇಳಿದರು.
ಬಡವರು, ಮಹಿಳೆಯರು, ಯುವಕರು ಹಾಗೂ ರೈತರು ಸರ್ಕಾರದ ಪಾಲಿಗೆ ನಾಲ್ಕು ಜಾತಿಗಳು ಎಂದೂ ಅವರು ಪ್ರತಿಪಾದಿಸಿದರು.
Next Story