ಕುಸ್ತಿಪಟುಗಳು ಪದಕ ವಾಪಸ್ ನೀಡಿರುವುದು ಬಿಜೆಪಿಯ ಅಸಂವೇದನೆಯನ್ನು ಬಹಿರಂಗಪಡಿಸಿದೆ: ಗೆಹ್ಲೋಟ್
ಅಶೋಕ್ ಗೆಹ್ಲೋಟ್ (PTI)
ಹೊಸದಿಲ್ಲಿ: ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಹಾಗೂ ಬಜರಂಗ್ ಪುನಿಯಾ ಅವರು ತಮ್ಮ ಪದಕವನ್ನು ಹಿಂದಿರುಗಿಸಿರುವುದು ಮಹಿಳೆಯರು ಹಾಗೂ ಅವರ ಸುರಕ್ಷೆ ಕುರಿತ ಬಿಜೆಪಿಯ ಅಸಂವೇದನೆಯನ್ನು ಬಹಿರಂಗಪಡಿಸಿದೆ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶುಕ್ರವಾರ ಹೇಳಿದ್ದಾರೆ
ಗೆಹ್ಲೋಟ್ ಅವರು ತನ್ನ ‘ಎಕ್ಸ್’ನಲ್ಲಿ ‘‘ಪದಕ ತರುವ ಮೂಲಕ ದೇಶಕ್ಕೆ ಕೀರ್ತಿ ತಂದ ಸಾಕ್ಷಿ ಮಲ್ಲಿಕ್ ಅವರು ಮೊದಲು ನಿವೃತ್ತಿ ಘೋಷಿಸಿದರು. ಈಗ ಬಜರಂಗ್ ಪುನಿಯಾ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ. ಇಂದು ಕುಸ್ತಿಪಟುಗಳ ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟದಲ್ಲಿ ಬಿಜೆಪಿಯ ಉದ್ದೇಶದ ಕುರಿತು ಪ್ರಶ್ನೆ ಎತ್ತುವಂತೆ ಮಾಡಿದೆ’’ ಎಂದು ಅವರು ಬರೆದುಕೊಂಡಿದ್ದಾರೆ.
ಈ ವಿಷಯದಲ್ಲಿ ಬಿಜೆಪಿಯ ದುರ್ವರ್ತನೆ ಹಾಗೂ ಸಂತ್ರಸ್ತರ ಬೇಡಿಕೆಗಳನ್ನು ಕಡೆಗಣಿಸಿರುವುದು ಖಂಡನೀಯ ಹಾಗೂ ದುಃಖಕರ. ಇದು ಮಹಿಳಾ ಸುರಕ್ಷೆ ಕುರಿತು ಬಿಜೆಪಿಯ ಅಸಂವೇದನೆಯನ್ನು ಬಹಿರಂಗಪಡಿಸಿದೆ ಎಂದು ಅವರು ಹೇಳಿದರು.
Next Story