"ನೀವು ಮುಂದೊಂದು ದಿನ ಮಹಾರಾಷ್ಟ್ರದ ಸಿಎಂ ಆಗಲಿದ್ದೀರಿ": ಅಜಿತ್ ಪವಾರ್ ಉದ್ದೇಶಿಸಿ ದೇವೇಂದ್ರ ಫಡ್ನವಿಸ್ ಹೇಳಿಕೆ
Photo | PTI
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, “ನೀವು ಮುಂದೊಮ್ಮೆ ಮುಖ್ಯಮಂತ್ರಿ ಆಗಲಿದ್ದೀರಿ” ಎಂದು ಎನ್ಸಿಪಿ ನಾಯಕ ಅಜಿತ್ ಪವಾರ್ ಅವರನ್ನುದ್ದೇಶಿಸಿ ಹೇಳಿದರು ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಜಿತ್ ಪವಾರ್ ಶಾಶ್ವತವಾಗಿ ಉಪ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಮುಂದೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
“ನಿಮ್ಮನ್ನು ಶಾಶ್ವತ ಉಪ ಮುಖ್ಯಮಂತ್ರಿ ಎಂದು ಕರೆಯಲಾಗುತ್ತಿದೆ. ಆದರೆ, ನನ್ನ ಹಾರೈಕೆಗಳು ನಿಮ್ಮೊಂದಿಗಿವೆ. ಮುಂದೊಮ್ಮೆ ನೀವು ಮುಖ್ಯಮಂತ್ರಿಯಾಗಲಿದ್ದೀರಿ” ಎಂದು ಅಜಿತ್ ಪವಾರ್ ಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಶುಭ ಹಾರೈಸಿದರು.
ಡಿಸೆಂಬರ್ 5ರಂದು ಮತ್ತೊಮ್ಮೆ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆಯೊಂದಿಗೆ ಎನ್ಸಿಪಿ ಮುಖ್ಯಸ್ಥರಾದ ಅಜಿತ್ ಪವಾರ್ ಅವರು ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.