ಹೋಳಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಆರೋಪ: ಬಾಲಿವುಡ್ ನಿರ್ಮಾಪಕಿ ಫರಾ ಖಾನ್ ವಿರುದ್ಧ ಪ್ರಕರಣ ದಾಖಲು

instagram.com/farahkhankunder
ಮುಂಬೈ: ಹೋಳಿ ಹಬ್ಬದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ಖ್ಯಾತ ಬಾಲಿವುಡ್ ಚಿತ್ರ ನಿರ್ಮಾಪಕಿ ಮತ್ತು ಕೊರಿಯೋಗ್ರಾಫರ್ ಫರ್ಹಾ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಸಂಬಂಧ ಹಿಂದೂಸ್ತಾನಿ ಭಾವೂ ಎಂದೇ ಜನಪ್ರಿಯರಾಗಿರುವ ವಿಕಾಶ್ ಪಾಠಕ್ ತಮ್ಮ ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ್ ಅವರ ಮೂಲಕ ದೂರು ನೀಡಿದ್ದರು. ಖಾರ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ. ಫೆಬ್ರುವರಿ 20ರಂದು ಪ್ರಸಾರವಾದ ಸೆಲೆಬ್ರಿಟಿ ಮಾಸ್ಟರ್ ಶೆಫ್ ಕಾರ್ಯಕ್ರಮದ ಸಂಚಿಕೆಯಲ್ಲಿ ಫರ್ಹಾ ನೀಡಿರುವ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
ಹೋಳಿ ಹಬ್ಬವನ್ನು ಫರ್ಹಾ, ಛಪ್ರಿಗಳ ಹಬ್ಬ ಎಂದು ಕರೆದಿದ್ದಾರೆ ಎನ್ನುವುದು ದೂರುದಾರರ ಆಕ್ಷೇಪ. ಛಪ್ರಿ ಎಂಬ ಪದವನ್ನು ಆಕ್ಷೇಪಾರ್ಹ ಎಂದು ಪರಿಗಣಿಸಲಾಗತ್ತದೆ. ಖಾನ್ ಹೇಳಿಕೆ ನನ್ನ ಧಾರ್ಮಿಕ ಭಾವನೆಗಳನ್ನು ಮತ್ತು ಹಿಂದೂ ಸಮಾಜದ ಘಾಸಿಗೊಳಿಸಿದೆ ಎಂದು ಅರ್ಜಿದಾರರು ದೂರಿದ್ದಾರೆ.
ಭಾರತೀಯ ದಂಡಸಂಹಿತೆಯ ಸೆಕ್ಷನ್ 196, 299, 302 ಮತ್ತು 353ರ ಅನ್ವಯ ಪ್ರಕರಣ ದಾಖಲಾಗಿದೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28