ಫಾದರ್ ಮುಲ್ಲರ್ ಆ್ಯಂಕೊಲಾಜಿಗೆ ಎಫ್‌ಕೆಸಿಎ 10 ಲಕ್ಷ ರೂ. ಕೊಡುಗೆ
ಮಂಗಳೂರು: ಬೆಂಗಳೂರಿನ ಕೊಂಕಣಿ ಕೆಥೋಲಿಕ್ ಅಸೋಸಿಯೇಷನ್ಸ್ ಫೆಡರೇಶನ್ (ಎಫ್‌ಕೆಸಿಎ) ಕಂಕನಾಡಿ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ(ಎಫ್‌ಎಂಸಿಐ) ಆ್ಯಂಕೊಲಾಜಿ ವಿಭಾಗಕ್ಕೆ 10 ಲಕ್ಷ ರೂ. ದೇಣಿಗೆ ನೀಡಿದೆ.
ಕಂಕನಾಡಿ ಎಫ್‌ಎಂಸಿಐಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಎಫ್‌ಕೆಸಿಎ ಅಧ್ಯಕ್ಷ ರಾಬರ್ಟ್ ಕುಟಿನ್ಹಾ ಅವರು ಎಫ್‌ಎಂಸಿಐ ನಿರ್ದೇಶಕ ವಂ. ರಿಚರ್ಡ್ ಅಲೋಶಿಯಸ್ ಕೊಯೆಲ್ಲೊ ದೇಣಿಗೆಯ ಚೆಕ್ ಹಸ್ತಾಂತರಿಸಿದರು.
ಎಫ್‌ಎಂಎಚ್‌ಎಂಸಿ ಆಡಳಿತಾಧಿಕಾರಿ ವಂ. ಫಾಸ್ಟಿನ್ ಲ್ಯೂಕಾಸ್ , ಎಫ್‌ಎಂಎಂಸಿ ಆಡಳಿತಾಧಿಕಾರಿ ವಂ.ಅಜಿತ್ ಬಿ ಮಿನೇಜಸ್ , ಆಡಳಿತಾಧಿಕಾರಿ ವಂ. ಜೀವನ್ ಜಾರ್ಜ್ ಸಿಕ್ವೇರಾ , ಸಹಾಯಕ ಆಡಳಿತಾಧಿಕಾರಿ ವಂ. ಡೊನಾಲ್ಡ್ ನೀಲೇಶ್ ಕ್ರಾಸ್ತಾ, ಡೀನ್ ಡಾ.ಆಂಟನಿ ಸಿಲ್ವನ್ ಡಿ ಸೋಜ, ವೈಸ್ ಡೀನ್ ಡಾ.ವೆಂಕಟೇಶ್ ಬಿ ಎಂ , ವಿವಿಧ ಸಂಸ್ಥೆಗಳ ಪ್ರಾಂಶುಪಾಲ ರುಗಳಾದ ಪ್ರೊ.ಚೆರಿಶ್ಮಾ ಡಿಸಿಲ್ವಾ ,ಪ್ರೊ ಸಿಂಥಿಯಾ ಸಂತಮೇಯರ್ ,ಉಪಪ್ರಾಂಶುಪಾಲ ಡಾ.ಆಗ್ನೆಸ್ ಇ.ಜೆ , ಸಿಸ್ಟರ್ ನ್ಯಾನ್ಸಿ ಮಥಾಯಸ್ ಲೋಬೊ, ಎಫ್‌ಕೆಸಿಎ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ, ಮಾಜಿ ಅಧ್ಯಕ್ಷರುಗಳಾದ ಹೆನ್ರಿ ಜೆ ಪಿಂಟೊ, ಸಿಲ್ವಿಯನ್ ನೊರೊನ್ಹಾ , ಜೊತೆ ಕಾರ್ಯದರ್ಶಿಗಳಾದ ನೀಲ್ ಸಿಕ್ವೇರಾ ಮತ್ತು ಪೀಟರ್ ಅನಿಲ್ ರೇಗೊ , ಉಪಾಧ್ಯಕ್ಷ ನಿಗೆಲ್ ಫೆರ್ನಾಂಡಿಸ್ , ಮಾಧ್ಯಮ ಕಾರ್ಯದರ್ಶಿ ನಿಶಾಲ್ ಡಿಸೋಜ ಉಪಸ್ಥಿತರಿದ್ದರು.