ಮಂಗಳೂರು| ಸೆ.29ರಂದು ಬಿ.ವಿ. ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮ

Update: 2024-09-27 12:46 GMT

ಮಂಗಳೂರು, ಸೆ.26: ಬೆಂಗಳೂರಿನ ಹೊಸತು ಮಾಸಿಕ ಮತ್ತು ಎಂಎಸ್ ಕೃಷ್ಣನ್ ಟ್ರಸ್ಟ್ ಹಾಗೂ ಮಂಗಳೂರಿನ ಸಮದರ್ಶಿ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಬಿ.ವಿ. ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸವು ಸೆ.29ರಂದು ಬೆಳಗ್ಗೆ 10ಕ್ಕೆ ನಗರದ ಬಲ್ಮಠದ ಸಹೋದಯದ ಬಳಿಯಿರುವ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ನಡೆಯಲಿದೆ.

ವೈಜ್ಞಾನಿಕ ಮಾರ್ಕ್ಸ್‌ವಾದದ ಬೆಳವಣಿಗೆಗೆ ಅಪಾರವಾಗಿ ಶ್ರಮಿಸುತ್ತಿರುವ ಮತ್ತು ಸಿಪಿಐ ರಾಷ್ಟ್ರೀಯ ಮಂಡಳಿಯ ಸದಸ್ಯ, ಪಕ್ಷದ ಕೇಂದ್ರ ಶಿಕ್ಷಣ ವಿಭಾಗದ ಕಾರ್ಯದರ್ಶಿ, ಅಖಿಲ ಭಾರತ ಪ್ರಗತಿಪರ ವೇದಿಕೆಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅನಿಲ್ ರಾಜಿಂವಾಲೆ ಅವರು ಱಭಾರತ ಕಮ್ಯುನಿಸ್ಟ್ ಪಕ್ಷದ ವಿಭಜನೆ: ಕಾರಣಗಳು ಮತ್ತು ಪರಿಣಾಮಗಳು ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ.

ಈ ವರ್ಷಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷವು ವಿಭಜನೆಗೊಂಡು 60 ವರ್ಷಗಳಾದವು ಹಾಗೂ ಮುಂದಿನ ವರ್ಷ ಭಾರತ ಕಮ್ಯುನಿಸ್ಟ್ ಪಕ್ಷವು ಸ್ಥಾಪನೆಗೊಂಡು ನೂರು ವರ್ಷಗಳಾಗಲಿವೆ. ಈ ಸಂದರ್ಭ ಪಕ್ಷದ ವಿಭಜನೆಯ ಆ ಪುಟಗಳನ್ನು ಮತ್ತೊಮ್ಮೆ ಅವಲೋಕಿಸಿ ಅದರಿಂದ ದೇಶದ ಸಾಮಾಜಿಕ-ರಾಜಕೀಯ ವಲಯಗಳ ಮೇಲಾಗಿರುವ ಪರಿಣಾಮಗಳನ್ನು ವಿಶ್ಲೇಷಿಸುವುದು ಈ ವರ್ಷದ ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸದ ಉದ್ದೇಶವಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News