ಎ.13: ಸಂಗೀತದೊಂದಿಗೆ ಸ್ವಚ್ಛತೆ ಕಾರ್ಯಕ್ರಮ

Update: 2025-04-10 19:11 IST
ಎ.13: ಸಂಗೀತದೊಂದಿಗೆ ಸ್ವಚ್ಛತೆ ಕಾರ್ಯಕ್ರಮ
  • whatsapp icon

ಮಂಗಳೂರು: ದ.ಕ. ಮತ್ತು ಉಡುಪಿ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ವತಿಯಿಂದ ಎಪ್ರಿಲ್ 13ರಂದು ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದಿಂದ " ಸಂಗೀತದೊಂದಿಗೆ ಸ್ವಚ್ಛತೆ ನಡೆಯಲಿದೆ ಎಂದು ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ರಿ. ದ.ಕ. ಉಡುಪಿ ಜಿಲ್ಲೆಯ ಅಧ್ಯಕ್ಷ ಕೇಶವ ಕೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ರಿ. ದ.ಕ. ಉಡುಪಿ ಜಿಲ್ಲೆಯ 300ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಸಂಘಟನೆ ಆಗಿರುತ್ತದೆ.ಈ ಸಂಘಟನೆ ಕೇವಲ ಸಾಂಸ್ಕೃತಿಕವಾಗಿ ಸಂಸ್ಥೆಯನ್ನು ತೊಡಗಿಸಿ ಕೊಳ್ಳದೆ ಸಾಮಾಜಿಕ ಸೇವಾ ಕಾರ್ಯ ದಲ್ಲಿ ತೊಡಗಿಸಿಕೊಂಡಿದೆ. ಸಂಗೀತ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸಿ ಆರ್ಥಿಕ ಸಹಾಯವನ್ನು ಒದಗಿಸುವ ಕೆಲಸ ಮಾಡುತ್ತಾ ಬಂದಿದೆ. ಜೊತೆಗೆ ಆನಾಥಾಶ್ರಮ, ವೃದ್ಧಾಶ್ರಮ, ಕಾರಾಗೃಹ ಮತ್ತು ಶಾಲೆಗಳಲ್ಲಿ ಉಚಿತ ಸಂಗೀತ, ಊಟೋಪಚಾರ ಹಾಗೂ ಉಪಯುಕ್ತ ಸಲಕರಣೆಗಳನ್ನು ವಿತರಣೆ ಮಾಡಲಾಗಿದೆ.ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಗೆ ಸ್ವರ ಕುಡ್ಲ ಸಂಗೀತ ಸ್ಪರ್ಧೆ, ಸಂಗೀತ ಕಾರ್ಯಾಗಾರಗಳು, ಅಲ್ಲದೆ ಸಾಧಕರಿಗೆ ಸನ್ಮಾನ. ಸೌಹಾರ್ದ ಸಂಗೀತ, ಬಹುಭಾಷಾ ಕವಿಗೋಷ್ಠಿ ಇತ್ಯಾದಿ ಕಳೆದ 15 ವರ್ಷಗಳಿಂದ ಪ್ರತಿವರ್ಷ ನಡೆಸುತ್ತಿರುವ ಚಟುವಟಿಕೆಗಳು.ಇದೀಗ ಪರಿಸರ ನೈರ್ಮಲ್ಯಕ್ಕೆ ಸಂಬಂಧಿಸಿದ "ಸಂಗೀತದೊಂದಿಗೆ ಸ್ವಚ್ಛತೆ" ಎಂಬ ಕಾರ್ಯಕ್ರಮವನ್ನು ಎ.13ರಂದು ಬೆಳಿಗ್ಗೆ 7.30 ರಿಂದ 12.00 ಗಂಟೆಯ ವರೆಗೆ ನಗರದ ಲಾಲ್ ಬಾಗ್ ನಿಂದ ಉರ್ವ ಮೈದಾನದ ತನಕ ಹಮ್ಮಿಕೊಳ್ಳಲಾಗಿದೆ.

ಸಂಗೀತಕಲಾವಿದರು ನಡೆಸುವ ಈ ಸ್ವಚ್ಛತಾ ಕಾರ್ಯಕ್ರಮ ವನ್ನು ರೋಹನ್ ಕಾರ್ಪೋರೇಷನ್‌ ಆಡಳಿತ ನಿರ್ದೇಶಕರಾದ ರೋಹನ್ ಮೊಂತೆರೋ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಸ್ವಚ್ಚತಾ ರಾಯಬಾರಿ ಶೀನ ಶೆಟ್ಟಿ ಭಾಗವಹಿಸಲಿದ್ದಾರೆ. ಸ್ವಚ್ಛತಾ ಕಾರ್ಯದ ಆಯಾಸ ಮರೆಯಲು ದಾರಿಯುದ್ದಕ್ಕೂ ದೇಶಭಕ್ತಿಗೀತೆ, ಸಮೂಹಗಾನ, ಇತ್ಯಾದಿ ಸಂಗೀತದೊಂದಿಗೆ ನಡೆಯುವ ಈ ಪರಿಸರ ನೈರ್ಮಲ್ಯ ಕಾರ್ಯಕ್ರಮವನ್ನು ಸಾರ್ವಜನಿ ಕರು ಬೆಂಬಲಿಸುವಂತೆ ಕೇಶವ ಕೆ ಮನವಿ ಮಾಡಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಉಪಾಧ್ಯಕ್ಷ ಧನುರಾಜ್,ಪ್ರದಾನ ಕಾರ್ಯ ದರ್ಶಿ ರಾಮ್ ಕುಮಾರ್, ಖಜಾಂಜಿ ಹರೀಣಿ,ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ, ಇಕ್ಭಾಲ್,ರಮೇಶ್ ಸಾಲ್ಯಾನ್,ಸಲಹೆಗಾರ ತೋನ್ಸೆ ಪುಷ್ಕಳ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News