ಎ.18, 19: ಗಾಂಧಿಭವನದಲ್ಲಿ ಲಕ್ಷ್ಮೀಶ ತೋಳ್ಪಾಡಿ ಉಪನ್ಯಾಸ
Update: 2025-04-16 21:50 IST
ಬೆಂಗಳೂರು, ಎ.16: ಶಿವರಾಮ ಕಾರಂತ ವೇದಿಕೆ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಏಪ್ರಿಲ್ 18 ಹಾಗೂ19 ರಂದು ಸಂಜೆ 6 ಗಂಟೆಗೆ ವಿದ್ವಾಂಸ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಅವರಿಂದ ‘ಭಕ್ತಿ ಮತ್ತು ಸಾಹಿತ್ಯ ’ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷೆ ದೀಪಾ ಫಡ್ಕೆ ತಿಳಿಸಿದ್ದಾರೆ.