ಎ.19-20: ಮಂಗಳೂರಿನಲ್ಲಿ ಬ್ಯಾರೀಸ್ ಫೆಸ್ಟಿವಲ್

Update: 2025-04-16 19:36 IST
ಎ.19-20: ಮಂಗಳೂರಿನಲ್ಲಿ ಬ್ಯಾರೀಸ್ ಫೆಸ್ಟಿವಲ್
  • whatsapp icon

ಮಂಗಳೂರು, ಎ.16: ಕರ್ನಾಟಕ ಬ್ಯಾರೀಸ್ ಸೋಶಿಯಲ್ ಆ್ಯಂಡ್ ಕಲ್ಚರಲ್ ಫೋರಂ ವತಿಯಿಂದ ಎ.19, 20ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಱಬ್ಯಾರೀಸ್ ಫೆಸ್ಟಿವಲ್-2025 ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಎ.19ರಂದು ಬೆಳಗ್ಗೆ 10ಕ್ಕೆ ಫೆಸ್ಟಿವಲ್ ಉದ್ಘಾಟನೆ ನಡೆಯಲಿದೆ. ಪೂ.11ಕ್ಕೆ ಬಿಸಿನೆಸ್ ಮೀಟ್, ಮಧ್ಯಾಹ್ನ 12ಕ್ಕೆ ಮಹಿಳಾ ಬಹುಭಾಷಾ ಕವಿಗೋಷ್ಠಿ, ಮಧ್ಯಾಹ್ನ 2ಕ್ಕೆ ಬಾಲಪ್ರತಿಭೆ ಮತ್ತು ಕ್ವಿಝ್ ಸ್ಪರ್ಧೆ, ಅಪರಾಹ್ನ 3ಕ್ಕೆ ಹಾಸ್ಯ ಕಾರ್ಯಕ್ರಮ, 4:30ಕ್ಕೆ ಸಂಗೀತ ಕಾರ್ಯಕ್ರಮ, ರಾತ್ರಿ 7ಕ್ಕೆ ದಫ್ ಕಾರ್ಯಕ್ರಮ ನಡೆಯಲಿದೆ.

ಎ.20ರಂದು ಬೆಳಗ್ಗೆ 10ಕ್ಕೆ ಸಂಗೀತ ಸೊಬಗು, ಪೂ.11ಕ್ಕೆ ಶೈಕ್ಷಣಿಕ ಮೇಳ, ಮಧ್ಯಾಹ್ನ 12ಕ್ಕೆ ಮಹಿಳಾ ಚರ್ಚಾಗೋಷ್ಠಿ, 2ಕ್ಕೆ ಸಂಗೀತ ಕಾರ್ಯಕ್ರಮ, ಅಪರಾಹ್ನ 3:30ಕ್ಕೆ ಸನ್ಮಾನ ಕಾರ್ಯಕ್ರಮ, 5ಕ್ಕೆ ಮಾಪಿಳ್ಳ ಹಾಡು, 7ಕ್ಕೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News