ಎ.20ರಂದು ಎಣ್ಮೂರು-ಐವತ್ತೊಕ್ಲು ರಹ್ಮಾನಿಯಾ ಕೇಂದ್ರ ಜುಮಾ ಮಸ್ಜಿದ್ ನಲ್ಲಿ ಸ್ವಲಾತ್ ವಾರ್ಷಿಕ
Update: 2025-04-15 18:55 IST
ಸುಳ್ಯ, ಎ.15: ಎಣ್ಮೂರು-ಐವತ್ತೊಕ್ಲು ರಹ್ಮಾನಿಯಾ ಕೇಂದ್ರ ಜುಮಾ ಮಸ್ಜಿದ್‌ನಲ್ಲಿ ಪ್ರತೀ ವಾರ ನಡೆಯುತ್ತಿರುವ ಸ್ವಲಾತ್ ಮಜ್ಲಿಸ್‌ನ ವಾರ್ಷಿಕ ಎ.20ರಂದು ರಾತ್ರಿ 9ಕ್ಕೆ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.
ಸ್ವಲಾತ್‌ನ ನೇತೃತ್ವವನ್ನು ಅಸ್ಸೈಯದ್ ಝೈನುಲ್ ಅಬಿದೀನ್ ತಂಙಳ್ ಮುಚ್ಚಿಲ-ಎಣ್ಮೂರು ವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜುಮಾ ಮಸ್ಜಿದ್‌ನ ಅಧ್ಯಕ್ಷ ಇಸ್ಮಾಯೀಲ್ ಪಡ್ಪಿನಂಗಡಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಜುಮಾ ಮಸ್ಜಿದ್ ಖತೀಬ್ ಅಲ್ಹಾಜ್ ಅಬ್ದುಲ್ಲಾ ಮದನಿ ನೆರವೇರಿಸಲಿದ್ದಾರೆ. ಬಿಜೆಎಂ ಬನ್ನೂರು ಮುದ್ರರಿಸ್ ಸಿರಾಜುದ್ದೀನ್ ಸಖಾಫಿ ಕನ್ಯಾನ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.