2024ನೇ ಸಾಲಿನ ಬಹುಮಾನಕ್ಕೆ ಬ್ಯಾರಿ ಪುಸ್ತಕಗಳ ಆಹ್ವಾನ

Update: 2025-04-15 18:30 IST
2024ನೇ ಸಾಲಿನ ಬಹುಮಾನಕ್ಕೆ ಬ್ಯಾರಿ ಪುಸ್ತಕಗಳ ಆಹ್ವಾನ
  • whatsapp icon

ಮಂಗಳೂರು, ಎ.15: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2024ನೇ ಸಾಲಿನ  ಪುಸ್ತಕ ಬಹುಮಾನಕ್ಕೆ ಬ್ಯಾರಿ ಭಾಷೆಯಲ್ಲಿ ಪ್ರಕಟಿತ ಸಾಹಿತ್ಯದ ಎಲ್ಲಾ ಪ್ರಕಾರದ ಪುಸ್ತಕಗಳನ್ನು ಆಹ್ವಾನಿಸಿದೆ. ಇತರ ಭಾಷೆಗಳಿಂದ ಬ್ಯಾರಿಗೆ ಅನುವಾದ ಮಾಡಲಾಗಿರುವ ಕೃತಿಯನ್ನೂ ಪ್ರಶಸ್ತಿಗೆ ಪರಿಗಣಿಸಲಾಗು ವುದು. ಪುಸ್ತಕ ಬಹುಮಾನವು 25,000 ರೂ.ನಗದು, ಪ್ರಮಾಣ ಪತ್ರ, ಸ್ಮರಣಿಕೆ ಮತ್ತು ಫಲಪುಷ್ಪಾಹಾರ ಗಳನ್ನು ಒಳಗೊಂಡಿರುತ್ತದೆ. ಪ್ರತೀ ಪ್ರಕಾರದಲ್ಲೂ ಕನಿಷ್ಠ ಮೂರು ಬ್ಯಾರಿ ಪುಸ್ತಕಗಳು ಪ್ರಕಟವಾಗಿದ್ದಲ್ಲಿ ಮಾತ್ರ ಬಹುಮಾನದ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.

ಆಸಕ್ತರು ಪ್ರತಿಯೊಂದು ಪುಸ್ತಕದ ನಾಲ್ಕು ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಸಾಮರ್ಥ್ಯ ಸೌಧ, 2ನೇ ಮಹಡಿ, ಮಂಗಳೂರು ತಾಪಂ ಹಳೆಯ ಕಟ್ಟಡ, ಮಿನಿ ವಿಧಾನ ಸೌಧದ ಬಳಿ, ಮಂಗಳೂರು-575001 ಈ ವಿಳಾಸಕ್ಕೆ ಎ.30ರ ಒಳಗೆ ಸಲ್ಲಿಸುವಂತೆ ಅಕಾಡಮಿಯ ಅಧ್ಯಕ್ಷ ಉಮರ್ ಯು. ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News