ಎ.22 ‘ಕಾಲುಸಾವಿರ’ ಚುಟುಕುಗಳು - ಕೃತಿ ಬಿಡುಗಡೆ

ಮಂಗಳೂರು, ಎ.17: ಕಲ್ಲಚ್ಚು ಪ್ರಕಾಶನ ಹೊರತಂದಿರುವ ಕವಿ ಮನೋಜ್ ಕುಮಾರ್ ಶಿಬಾರ್ಲ (ಜ್ಞಾನಭಿಕ್ಷು ) ಇವರ ‘ಕಾಲುಸಾವಿರ’ ಚುಟುಕುಗಳು ಹನಿಕವನ ಸಂಕಲನ ಎ. 22 ಅಪರಾಹ್ನ 4 ಗಂಟೆಗೆ ಕೊಡಿಯಾಲ್‌ಬೈಲ್ ಜೈಲು ರಸ್ತೆಯಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ(ಡಯಟ್) ‘ರಾಣಿ ಅಬ್ಬಕ್ಕ’ ಸಭಾಂಗಣದಲ್ಲಿ ನಡೆಯಲಿದೆ.
ಡಯಟ್ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರಾದ ರಾಜಲಕ್ಷ್ಮೀ ಕೆ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು.
ಹಿರಿಯ ಸಾಹಿತಿ, ಬೆಂಗಳೂರಿನ ಟೀಂ ಐಲೇಸಾದ ಸಂಸ್ಥಾಪಕ ಶಾಂತರಾಮ ಶೆಟ್ಟಿ ಕೃತಿಯನ್ನು ಲೋಕಾರ್ಪಣೆ ಮಾಡಲಿರುವರು. ನಿವೃತ್ತ ಉಪನ್ಯಾಸಕ ವ.ಉಮೇಶ ಕಾರಂತ ಕೃತಿಯ ಪರಿಚಯ ಮಾಡುವರು ನಿವೃತ್ತ ಶಿಕ್ಷಕಿ ಹಾಗೂ ಸಾಹಿತಿ ನಳಿನಾಕ್ಷಿ ಉದಯರಾಜ್, ಹಿರಿಯ ಪತ್ರಕರ್ತ ಬಾಲಕೃಷ್ಣ ಶಿಬಾರ್ಲ , ಸಾಹಿತಿ ಹಾಗೂ ಪ್ರಕಾಶಕ ಮಹೇಶ ಆರ್. ನಾಯಕ್, ದ.ಕ.ಚುಟುಕು ಸಾಹಿತ್ಯ ಪರಿಷತ್‌ನ ಗೌರವ ಅಧ್ಯಕ್ಷ ಇರಾ ನೇಮು ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
*ಕವಿಗೋಷ್ಠಿ: ಅಪರಾಹ್ನ 2 ರಿಂದ 4 ವರೆಗೆ ‘ಚೈತ್ರದ ಚುಟುಕುಗಳು’ ಎಂಬ ವೈಶಿಷ್ಟ್ಯಪೂರ್ಣ ಕವಿಗೋಷ್ಠಿ ನಡೆಯಲಿದ್ದು, ಕವಿಗೋಷ್ಠಿಯಲ್ಲಿ 30 ಮಂದಿ ಕವಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.