ಎ.25: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ತುಳು ಭಾಷೆ ಬದ್ಕ್ - ಗೇನದ ಪೊಲಬು -ತುಲಿಪು’
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ‘ತುಳು ಭಾಷೆ ಬದ್ಕ್ ಗೇನದ ಪೊಲಬು -ತುಲಿಪು’ ಒಂದು ದಿನದ ವಿಚಾರ ಸಂಕಿರಣ ಎ.25ರಂದು ನಡೆಯಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಇವರು ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿಯಾದ ವಿವೇಕ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಂಆರ್ ಪಿಎಲ್‌ನ ಕಾರ್ಪೊರೇಟ್ ಕಮ್ಯುನಿಕೇಶನ್ ವಿಭಾಗದ ಚೀಫ್ ಜನರಲ್ ಮ್ಯಾನೇಜರ್ ರುಡಾಲ್ಫ್ ನೊರೊನ್ಹ , ಆಳ್ವಾಸ್ ಎಂಜಿನಿಯ ರಿಂಗ್ ಮತ್ತು ತಂತ್ರಜ್ಙಾನ ಸಂಸ್ಥೆಯ ಪ್ರಾಂಶುಪಾಲ ಡಾ. ಪೀಟರ್ ಫೆನಾರ್‌ಂಡಿಸ್ ಮತ್ತು ಆಳ್ವಾಸ್ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿಚಾರಗೋಷ್ಠಿ ನಡೆಯಲಿವೆ.
ಮೊದಲ ಗೋಷ್ಠಿಯಲ್ಲಿ ‘ವಿದೇಶಿ ಪ್ರವಾಸಿಗೆರ್ ಬೊಕ್ಕ ವ್ಯಾಪಾರಿಲು ಬರೆತಿನ ಪ್ರಾಚೀನ ತುಳುನಾಡ್ದ ಚಿತ್ರಣ’ ವಿಷಯದ ಬಗ್ಗೆ ಡಾ. ರುಡಾಲ್ಫ್ ನೊರೊನ್ಹ ಮಾತನಾಡಲಿದ್ದಾರೆ . ಎರಡನೇ ಗೋಷ್ಠಿಯಲ್ಲಿ ‘ತುಳುನಾಡ್ದ ಸಾಮರಸ್ಯ ಪರಂಪರೆ’ ವಿಷಯದ ಬಗ್ಗೆ ಆಳ್ವಾಸ್ ಬಿ.ಎಡ್ ಕಾಲೇಜಿನ ವಿದ್ಯಾರ್ಥಿ ರಿಯಾಜ್ ಕಾರ್ಕಳ ಇವರು ಮಾತನಾಡಲಿದ್ದಾರೆ. ಮೂರನೇ ಗೋಷ್ಠಿಯಲ್ಲಿ ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಅವರು ‘ತುಳುವೆರೆನ ಸಂಸ್ಕೃತಿಡ್ ಅಪ್ಪೆನ ಸ್ಥಾನಮಾನ’ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ.
ನಾಲ್ಕನೇ ಗೋಷ್ಠಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಬಂಗಾಳ ಬಾಬು ಕೊರಗ ಅವರು ‘ತುಳು ಭಾಷೆ ಮತ್ತು ಕೊರಗ ಭಾಷೆಯ ಸಂಬಂಧ’ದ ಬಗ್ಗೆ ಮಾತನಾಡಲಿದ್ದಾರೆ. ಕೊನೆಯ ಗೋಷ್ಠಿಯಲ್ಲಿ ಚಲನಚಿತ್ರ ನಟ ಹಾಗೂ ಗಾಯಕರಾದ ಮೈಮ್ ರಾಮ್ ದಾಸ್ ಅವರು ತುಳು ಜನಪದ ಪದೊಕುಲ್’ ವಿಷಯದ ಬಗ್ಗೆ ಮಾತನಾಡಲಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಕಟನೆ ತಿಳಿಸಿದೆ.