ಎ.29: ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಕೂಳೂರಿನಲ್ಲಿ ಪ್ರತಿಭಟನಾ ಸಭೆ ನಡೆಸಲು ನಿರ್ಧಾರ

ಮಂಗಳೂರು: ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ವಿವಿಧ ಸಂಘ, ಸಂಸ್ಥೆಗಳ ಸಹಭಾಗಿತ್ವದಲ್ಲಿ ಎ.29ರಂದು ಅಪರಾಹ್ನ 3ಕ್ಕೆ ಕೂಳೂರಿನ ಡೆಲ್ಟಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಲು ಸೋಮವಾರ ಕುದ್ರೋಳಿಯ ಜಾಮಿಯಾ ಮಸೀದಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್‌ರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆಗೆ ಸಂಬಂಧಿಸಿದಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ, ಹಿನಾಯತುಲ್ಲ ಶಾಹಬರಿ ಭಟ್ಕಳ, ಕೆಪಿಸಿಸಿ ಕಾರ್ಯದರ್ಶಿ ಗಳಾದ ಜಿ.ಎ.ಬಾವ, ಎಂ.ಎಸ್. ಮುಹಮ್ಮದ್, ದ.ಕ.ಜಿಲ್ಲಾ ವಕ್ಪ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮಾಜಿ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್, ಯುನಿವೇಫ್ ಕರ್ನಾಟಕ ಇದರ ಅಧ್ಯಕ್ಷ ರಫಿಯುದ್ದೀನ್ ಕುದ್ರೊಳಿ, ಜಮಾಅತೆ ಇಸ್ಲಾಂ ಹಿಂದ್‌ನ ಮುಖಂಡ ಸೈಯದ್ ಇಸ್ಮಾಯಿಲ್, ಕರ್ನಾಟಕ ಮುಸ್ಲಿಂ ಜಮಾತಿನ ಹೈದರ್ ಪರ್ತಿಪಾಡಿ, ಮುಹಮ್ಮದ್ ಫರ್ಹಾನ್, ಮುಸ್ಲಿಂ ಲೀಗ್‌ನ ರಿಯಾಝ್, ಇಕ್ಬಾಲ್ ಮುಲ್ಕಿ, ಹಿಫ್ ಸಂಘಟನೆಯ ರಿಝ್ವಾನ್. ಇಮಾಮ್ ಕೌನ್ಸಿಲ್‌ನ ಜಾಫರ್ ಫೈಝಿ, ಎಸ್‌ಕೆಎಸ್‌ಎಂ ಸಂಘಟನೆಯ ಅಬ್ದುಲ್ ಲತೀಫ್, ಮದ್ರಸಾ ಮ್ಯಾನೇಜ್ಮೆಂಟ್‌ನ ರಫೀಕ್, ಎಸ್‌ಡಿಪಿಐ ನಗರ ಜಿಲ್ಲಾಧ್ಯಕ್ಷ ಜಲೀಲ್ ಕೃಷ್ಣಾಪುರ, ಕುದ್ರೋಳಿ ಜಾಮಿಯಾ ಮಸೀದಿಯ ಸದಸ್ಯ ಡಾ. ಮುಹಮ್ಮದ್ ಆರಿಫ್ ಮಸೂದ್,ಬೆಂಗರೆ ಮಸೀದಿಯ ಅಧ್ಯಕ್ಷ ಬಿಲಾಲ್ ಮೊಯಿದಿನ್, ಸುಹೈಲ್ ಕಂದಕ್, ಅಬ್ಬಾಸ್ ಬಂಟ್ವಾಳ, ಶೇಕ್ ಫರೀದ್ ವಾಸಿಂ ಕುಂದಾಪುರ, ವಹಾಬ್ ಕುದ್ರೊಳಿ, ರಫೀಕ್ ದುಬೈ, ಯು.ಬಿ. ಸಲೀಂ ಉಳ್ಳಾಲ್ ಸಲಹೆ ಸೂಚನೆ ನೀಡಿದರು.
ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಕೆ. ಅಶ್ರಫ್ ಸ್ವಾಗತಿಸಿದರು. ಕಾರ್ಯದರ್ಶಿ ಡಿ.ಎಂ. ಅಸ್ಲಂ ವಂದಿಸಿ ದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹಾಜಿ ಬಿ. ಅಬೂಬಕ್ಕರ್ ಸಹಕರಿಸಿದರು.