ದ.ಕ.ಜಿಲ್ಲೆಗೆ ಅಲ್ಪಸಂಖ್ಯಾತರ 6 ವಸತಿ ನಿಲಯಗಳು ಮಂಜೂರು
Update: 2024-08-01 06:17 GMT
ಮಂಗಳೂರು: ದಕ್ಷಿಣ ಜಿಲ್ಲೆಗೆ 2024-25ನೇಸಾಲಿಗೆ ಅಲ್ಪಸಂಖ್ಯಾತರ 6 ಮೆಟ್ರಿಕ್ ನಂತರದ ವಸತಿನಿಲಯಗಳು ಮಂಜೂರಾಗಿದೆ.
ಮೂಡುಬಿದಿರೆ ಮತ್ತು ಸುರತ್ಕಲ್ ಗೆ ಬಾಲಕರ ವಸತಿನಿಲಯ ತಲಾ 1, ಮಂಗಳೂರು ನಗರಕ್ಕೆ 2 (ಬಾಲಕರ ಮತ್ತು ಬಾಲಕಿಯರ ವಸತಿನಿಲಯ ), ಮತ್ತು ಕೊಣಾಜೆಗೆ 2(ಬಾಲಕರ ಮತ್ತು ಬಾಲಕಿಯರ ವಸತಿನಿಲಯ ) ಮಂಜೂರುಗೊಂಡಿದೆ
ಉಡುಪಿಯ ಮಣಿಪಾಲಕ್ಕೆ ತಲಾ ಒಂದು ಬಾಲಕ ಮತ್ತು ಬಾಲಕಿಯರ ವಸತಿನಿಲಯಗಳನ್ನು ಸರಕಾರ ನೀಡಿದೆ.
ರಾಜ್ಯದಲ್ಲಿ ತಲಾ 100 ಮಂದಿಯ ಸಂಖ್ಯಾ ಬಲದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಒಟ್ಟು 96 ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳಿಗೆ ಸರಕಾರ ಮಂಜೂರಾತಿ ನೀಡಿದೆ .