ಅಕ್ಷರ ದಾಸೋಹ ನೌಕರರ ಬೇಡಿಕೆ ಈಡೇರಿಸದಿದ್ದರೆ ಅನಿರ್ದಿಷ್ಟ ಹೋರಾಟ: ರಾಮಣ್ಣ ವಿಟ್ಲ

Update: 2023-11-07 22:41 IST
ಅಕ್ಷರ ದಾಸೋಹ ನೌಕರರ ಬೇಡಿಕೆ ಈಡೇರಿಸದಿದ್ದರೆ ಅನಿರ್ದಿಷ್ಟ ಹೋರಾಟ: ರಾಮಣ್ಣ ವಿಟ್ಲ
  • whatsapp icon

ಬಂಟ್ವಾಳ : ಅಕ್ಷರ ದಾಸೋಹ ನೌಕರರಿಗೆ ಚುನಾವಣೆ ಸಂದರ್ಭ ವೇತನ ಏರಿಕೆ ಮಾಡುವ ಬಗ್ಗೆ ನೀಡಿದ ಭರವಸೆ ಯನ್ನು ಕೂಡಲೇ ಈಡೇರಿಸಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿ.ಸಿ‌.ರೋಡ್ ಆಡಳಿತ ಸೌಧದ ಮುಂಭಾಗ ಕರ್ನಾಟಕ ರಾಜ್ಯ ಪ್ರಗತಿಪರ ಅಕ್ಷರ ದಾಸೋಹ ನೌಕರರ ಸಂಘ ಎ.ಐ.ಸಿ.ಸಿ.ಟಿ.ಯು ವತಿಯಿಂದ ಪ್ರತಿಭಟನೆ ‌ನಡೆಯಿತು.

ಪ್ರತಿಭಟನೆ ಯನ್ನುದ್ದೇಶಿಸಿ ಎ.ಐ.ಸಿ.ಸಿ.ಟಿ.ಯು ಜಿಲ್ಲಾಧ್ಯಕ್ಷ ಎ.ರಾಮಣ್ಣ ವಿಟ್ಲ ಮಾತನಾಡಿ ಅಕ್ಷರ ದಾಸೋಹ ನೌಕರರು ಕಳೆದ ಇಪ್ಪತ್ತು ವರ್ಷಗಳಿಂದ ಕಡಿಮೆ ವೇತನ ದಲ್ಲಿ ದುಡಿಯುತ್ತಿದ್ದು 3 ತಿಂಗಳಿಂದ ಸಂಬಳ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದರು. ಚುನಾವಣೆ ಸಂಧರ್ಭದಲ್ಲಿ ಸಂಬಳ ಏರಿಕೆ ಮಾಡುವುದಾಗಿ ಭರವಸೆ ನೀಡಿದ್ದು ಸರಕಾರವು ಈ ವರೆಗೆ ಏರಿಕೆ ಮಾಡಿರುವುದಿಲ್ಲ ಕೂಡಲೇ ವೇತನ ಏರಿಕೆ ಮಾಡದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಳಿಕ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಹಾಗೂ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾ ಧಿಕಾರಿಯ ಮುಖಾಂತರ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ತಾಲೂಕು ಅಧ್ಯಕ್ಷೆ ಜಯಶ್ರೀ ಆರ್.ಕೆ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ವಾಣಿಶ್ರೀ , ಮುಖಂಡರಾದ ಜಯಂತಿ ಶಂಭೂರು, ವಾಣಿಶ್ರೀ , ವಿನಯ ನಡುಮೊಗರು, ಮಮತಾ ಬಿಳಿಯೂರು, ಯಶೋಧ, ರೇಖಾ, ಶಕುಂತಳಾ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News