ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅರಿವು ಸಾಲಕ್ಕೆ ಅರ್ಜಿ ಆಹ್ವಾನ

Update: 2024-08-22 18:54 IST
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅರಿವು ಸಾಲಕ್ಕೆ ಅರ್ಜಿ ಆಹ್ವಾನ
  • whatsapp icon

ಮಂಗಳೂರು : ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಬೌದ್ಧ, ಕ್ರಿಶ್ಚಿಯನ್, ಜೈನ್ಸ್, ಮುಸ್ಲಿಂ, ಪಾರ್ಸಿ, ಸಿಖ್ ಜನಾಂಗದ 2024-25ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ/ಡಿ-ಸಿಇಟಿ/ಪಿಜಿ-ಸಿಇಟಿ/ನೀಟ್ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅರಿವು (ರಿನ್ಯೂವಲ್) ಯೋಜನೆಯಡಿ ಸಾಲ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಆರ್ಕಿಟೆಕ್ಚರ್, ಆಯುಷ್, ಪಾರ್ಮಸಿ, ಕೃಷಿ ವಿಜ್ಞಾನ, ಎಂಬಿಎ, ಎಂಸಿಎ, ಎಲ್‌ಎಲ್‌ಬಿ ಕೋರ್ಸ್‌ಗಳಿಗೆ 50,000ರಿಂದ 5,00,000 ರೂ.ವರೆಗೆ ನೀಡಲಾಗುವುದು. ಸಾಲ ಪಡೆಯಲು ಉದ್ದೇಶಿರುವ ವಿದ್ಯಾರ್ಥಿಗಳು ನಿಗಮದ ವೆಬ್‌ಸೈಟ್ kmdconline.karnataka.gov.in ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ನಿಗಮದಿಂದ ಈ ಹಿಂದಿನ ವರ್ಷದಲ್ಲಿ ಪಡೆದಿರುವ ಸಾಲದ ಮೊತ್ತದ ಶೇ.12 ರಷ್ಟು ಆನ್‌ಲೈನ್ ಮೂಲಕ ಮರುಪಾವತಿಸಬೇಕಾಗಿರುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಈ ಹಿಂದೆ ಆಯ್ಕೆಯಾಗಿ ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅರಿವು ಸಾಲ ಪಡೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅಕ್ಟೋಬರ್ 1ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು.

ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಇಂಡೆಮ್ನಿಟಿ ಬಾಂಡ್ ಹಾಗೂ ಇತರೆ ದಾಖಲಾತಿಗಳನ್ನು ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ), ಮೌಲಾನಾ ಆಝಾದ್ ಭವನ 2ನೇ ಮಹಡಿ, ಪಾಂಡೇಶ್ವರ, ಮಂಗಳೂರು ತಾಲೂಕು-575001 ಈ ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಇಲಾಖಾ ಸಹಾಯವಾಣಿ ಸಂಖ್ಯೆ: 8277799990/ ನಿಗಮದ ವೆಬ್‌ಸೈಟ್ ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News