ಕಾಶ್ಮೀರ ಪ್ರವಾಸಿಗರ ಮೇಲೆ ದಾಳಿ ಅಸಹನೀಯ: ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್

Update: 2025-04-23 14:39 IST
ಕಾಶ್ಮೀರ ಪ್ರವಾಸಿಗರ ಮೇಲೆ ದಾಳಿ ಅಸಹನೀಯ: ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್
  • whatsapp icon

ಮಂಗಳೂರು: ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ಹಲವು ಮಂದಿ ಸಾವಿಗೀಡಾಗಿದ್ದು ಇದು ತೀರ ಖಂಡನೀಯ. ಇಂತಹ ಘಟನೆಗಳು ಮರುಕಳಿಸದಂತೆ ಸರಕಾರ ಪ್ರವಾಸಿಗರಿಗೆ ಭದ್ರತಾ ವ್ಯವಸ್ಥೆಯನ್ನು ಸೂಕ್ತವಾಗಿ ನೆರವೇರಿಸಬೇಕು ಎಂದು ದಕ್ಷಿಣಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ‌ ಬಿ.ಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಆಗ್ರಹಿಸಿದ್ದಾರೆ.

ಮೃತರ ಕುಟುಂಬಕ್ಕೆ ಅಲ್ಲಾಹು ಸಹನೆ ನೀಡಲಿ. ಸರಕಾರ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಈ ಘಟನೆಯ ಲೋಪದೋಷಗಳನ್ನು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಇದೀಗ ಬೇಸಿಗೆ ರಜಾ ಕಾಲವಾದುದರಿಂದ ಜನಸಾಮಾನ್ಯರು ಪ್ರವಾಸದಲ್ಲಿರುವ ಸಂದರ್ಭ. ಇಂತಹ ಎಲ್ಲಾ ಪ್ರವಾಸಿ ಸ್ಥಳಗಳಿಗೂ ಸೂಕ್ತ ಭದ್ರತೆ ಸರಕಾರ ಒದಗಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ತಿಳಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News